ಗಾಂಜ ಸೇದುವ ಬನ್ನಿ, ತಿಳಿವಿನ ಗಾಂಜ ಸೇದುವ ಬನ್ನಿಗಾಂಜ ಸೇದಿದರೆ ನಿಮಗೆ ಭವವಿಲ್ಲ ವೆನ್ನಿ ಪ
ಅವಗುಣವೆಂಬ ಭೂಮಿ ಶೋಧಿಸಿ ಅಗೆತ ಮಾಡಿದ ಗಾಂಜಸವನಿಸಿದ ಖೂರಾಕು ಹಾಕಿದ ಸತ್ವವಾದ ಗಾಂಜ1
ಸಾಧನೆ ಎಂಬ ನೀರು ಕಟ್ಟಿದ ಸಡಕು ಆದ ಗಾಂಜಭೇದವೆಂಬ ಕಳೆಯ ಕೆತ್ತಿದ ಬೋಧವೆಂಬ ಗಾಂಜ 2
ಭಜನೆ ಭಾವದಿಂದ ಬೆಳೆದ ಬಡಕು ಆದ ಗಾಂಜಕುಜನವೆಂಬ ಎಲೆಗಳ ಚಿವುಟಿದ ಕಡಕು ಆದ ಗಾಂಜ 3
ನಾನು ಎಂಬ ಹೂವು ಉದುರಿದ ನೊಣ ಹಾರದ ಗಾಂಜಜ್ಞಾನವೆಂಬ ಗೊಂಡೆಗಳಳಿದ ಘನ ತಾನಾದ ಗಾಂಜ 4
ಏನೇನ ಅರಿವು ಎಲ್ಲ ಅಡಗಿದ ಏಕವಾದ ಗಾಂಜತಾನೆ ಚಿದಾನಂದ ಸದ್ಗುರು ವಾದ ತಾನೆ ತಾನಾದ ಗಾಂಜ5