ನಾ ನಿನ್ನ ನಂಬಿದೆನೊ ಗೋಪಾಲಕೃಷ್ಣ ನಿನ್ನ ನಾನಂಬಿದೆನೊ
ಎನ್ನ ದಾನೆಂದೆಂಬ ಹಮ್ಮಿನವಶದಲಿ ಸುಮ್ಮನೆ ಮುಳುಗಿದೆನೋ
ಶ್ರೀ ಹರಿಯೆ ನಿನ್ನನಾ ನಂಬಿದೆನೋ ಪ
ಸಿರಿ ಸಹಿತಲಾಗಿ
ಚಿನುಮಯಾತ್ಮಕ ಆನಂದ ಕಟಾಕ್ಷದಿ
ತನಯ ನೆಂದೆನ್ನನು ಕಾಯೋ ಮುರಾರಿ 1
ದ್ರಷ್ಟವಾಗಿಹುದೆಲ್ಲ ಸಟೆಯಿದು
ನಷ್ಟವಾಗಿಯೆ ಪೋಪುದೋ
ಕಷ್ಟ ಸಂಸಾರದ ಬಟ್ಟೆಯು ಸ್ಥಿರವೆಂಬ
ತೊಟ್ಟ ಮುರಿದು ಕಾಯೋ ಶಿಷ್ಟ ಮುರಾರಿ 2
ಆಸೆಯಂಬಂಗನೆಯ ನಾಶವಮಾಡಿ ಸಲಹೋ ಎನ್ನ
ವಾಸುದೇವನೆ ನಿನ್ನ ದಾಸನ ಕರುಣದಿ ಪಾ
ಲಿಸಿ ಕಾಯೋ ಲಕ್ಷ್ಮೀಶ ಮುರಾರಿ 3