ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಾಹ್ಮಣನುಣಲಿಕೆ ರಾಗಿ ಹಿಟ್ಟು ತನ್ನ ಬಂಧು ಜನಕ್ಕೆ ಒಬ್ಬಟ್ಟು ಪ ಪಾಮರ ಜನರಲಿ ವಾಡಿಕೆಯಿದು | ಶ್ರೀ ರಾಮನೊಲಿವನೆ ಎಂದಿಗಾದರು ಅ.ಪ ಮಾತು ಮಾತಿಗೆ ಸಾಲಮಾಡಿ | ಬಹ ಳಾತುರದಲಿ ಓಡಾಡಿ ಜಾತುಕನಂದದಿ ಜನಗಳ ಮೆಚ್ಚಿಸಿ ಪಾತಕವಾದರು ಲಾಭವಧಿಕ 1 ದೊಡ್ಡದಾಗಿ ಮನೆಕಟ್ಟಿದರೆ -ಸಾಲ ಹೆಡ್ಡಗಾದರು ಹುಟ್ಟುವುದು ದುಡ್ಡುದೇವರಿಗಿಂತ ದೊಡ್ಡದೇವರು ಯಾವುದು? ಬಡ್ಡಿ ಹಚ್ಚು ಬರುವನೆ ಮಹರಾಯನು2 ಹೊಟ್ಟೆಗೆ ತಿಂಬುವದ್ಯಾರು ಬಲ್ಲರು? ವುಟ್ಟ ಬಟ್ಟೆಯಲ್ಲರು ನೋಡುವರು ಸಿಟ್ಟು ಬಂದರೆ ಬೆಂಕಿಯಂತವ ನಾನು ಹೊಟ್ಟೆ ಚಿಕ್ಕದು ಕಣ್ಣು ದೊಡ್ಡದು 3 ಪರಲೋಕವು ಉಂಟೆಂದು ಪೇಳು ವರರಿಯದವರು ತಾವು ಮುಂದು ನರಕವುಸ್ವರ್ಗವು ಯಾರು ನೋಡಿರುವರು ಪುರಾಣ ಶಾಸ್ತ್ರಗಳು ಯಾತಕೆ ಬಿಡಿ4 ಅತಿಥಿಗಳಿಗೆ ನೀರುಮಜ್ಜಿಗೆ | ಮೊಸರು ಸತಿಸುತರಿಗೂ ಮತ್ತು ತನಗೆ ಯಿತರರಿಗೆಲ್ಲಾ ಎಣ್ಣೆಕರೆದ ಭಕ್ಷ್ಯ ಘೃತಭಕ್ಷ ತನಗೆ ಮಾತ್ರ 5 ಎಣ್ಣೆಯು ಬಲುರುಚಿ ನಮಗೆ | ತುಪ್ಪ ವಿನ್ನೇತಕೆ ಹೆಚ್ಚು ಬೆಲೆಗೆ ಕಣ್ಣಲಿ ಕಂಡದು ಮಾತ್ರ ಸತ್ಯ | ನಾ ವನ್ಯರ ನುಡಿ ನಂಬುವುದಿಲ್ಲವು 6 ವೊರಿಗೆಲ್ಲ ನಾ ಮೇಟಿ | ಯನ್ನ ನಾರು ಪೋಲುವರು ಸಾಟಿ ನೂರೆಲೆ ಬೀಳ್ವುದು ನಮ್ಮ ಮನೇಲೀ ಘೋರ ಕ್ಷಾಮದಲಿ ನಾನೆ ಪೊರೆವೆ 7 ಪರರಂತೆ ನಾನಿರಬೇಕು | ಶ್ರೀ ಹರಿ ಇಷ್ಟು ಕೊಟ್ಟರೆ ಸಾಕು ಗುರುಹಿರಿಯರು ನುಡಿಯೇತಕವರು ಮುದು- ಕರು ಏನು ಬಲ್ಲರು ಲೌಕೀಕವ 8 ಗುರುರಾಮವಿಠಲೆಲ್ಲಿ ಭ್ರಾಂತು -ಈ ಕರೆಕರೆ ನಮಗೇಕೆ ಬಂತು ಸೇರಿತು ಬಡವರಾವು 9
--------------
ಗುರುರಾಮವಿಠಲ