ಗಂಡನೆ ಪ್ರಾಣಗಂಡನೇ ಪ
ತಿಂಡಿಬಟ್ಟೆಗೆ ತಂದು ಹಾಕದೆ ಜಿಣುಗುವಅ.ಪ
ಲಿಬ್ಬಿಯಿದ್ದರೆ ತೆಗೆದು ತಾರೆಂಬನು
ಅಬ್ಬರಿಸುತ ಕೂಗಿ ಕೈಯ್ಯೆತ್ತಿ ಬರುವನು
ಒಬ್ಬರಗೊಡವೆ ನಮಗ್ಯಾಕೆ ಎಂಬುವನು 1
ಸೀರೆ ಕುಪ್ಪಸಕೇಳೆ ಚೀರುತ್ತಯಿಲ್ಲೆಂಬ
ಯಾರೆ ನಿನಗೆ ಬಲಯೆಂಬುವನು
ಸೋರುವ ಮನೆಯಂತೆ ಎನ್ನ ಸಂಸಾರ 2
ಬಟ್ಟೆ ಮಾತಿನ್ನೇನು
ಯಣ್ಣೆಕಾಣದು ತಲೆಯೇನ್ಹೇಳಲಿ
ಕಣ್ಣುಕಾಣದೆ ನಮ್ಮಪ್ಪಯಿವಗೆ ಕೊಟ್ಟ
ಗನ್ನಘಾತಕನಿವ ಕಲಿಕಾಲಜಗಳ 3
ಓದುಬರಹಗಳೆಂಬ ಹಾದಿಯ ತಾಕಾಣ
ಆದದ್ದಾಗಲಿಯಿನ್ನೇನು ಮಾಡುವೆನಾನು 4
ಇರುಳು ಹಗಲುಯನ್ನ ಕರೆಕರೆ ಪಡಿಸುವ
ಚರಣಕಮಲವೆನಗೆ ದೊರೆಯುವುದ್ಹ್ಯಾಗೆ 5