ಸಂಪ್ರದಾಯದ ಕೀರ್ತನೆಗಳು
ಬಜಬೆಣ್ಣೆನಿಡುವೆನು ಬಾ ರಂಗ ಮೋಹನಾಂಗ ಕೃಷ್ಣಾ ಪ.
ಬಜ ಬೆಣ್ಣೆನಿಡುವೆನು ನಿಜರೂಪ ತೋರಿಸೊ
ಭುಜಗ ಶಯನ ದೇವಾ ಅ.ಪ.
ಮೀಸಲಳಿದ್ಹಾಲು ಕಾಸಿದ ಮೊಸರನ್ನ
ಸೋಸಿಲಿ ಕಡೆದ ಬೆಣ್ಣೆ ವಾಸುದೇವನೆ ನಾ 1
ಅಸುರ ಪೂತÀನಿಯ ವಿಷದ ಮೊಲೆಯನುಂಡು
ಕಸುವಿಸಿಯಾಗಿಹ ಹಸುಳೆ ನಿನ ಬಾಯೊಳು 2
ಉಡುಗೆ ತೊಡುಗೆ ತೊಡಿಸಿ ಕಡಗ ಕಂಕಣ ಕೈಗೆ
ವಡೆಯ ಶ್ರೀ ಶ್ರೀನಿವಾಸ ಸಡಗರÀದಲಿ ನಾ 3