ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮ ರಂಗ ಮಧುರೆಗೆ ನಡೆತರಲು ಪ ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ| ರಥದಲಿ ಕುಳಿತು ಫಡ ಫಡಫಡಲೆಂದು| ಪಥದಲಿ ನಡಸ್ಯಾಡುತಲಿ 1 ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ| ಇಲ್ಲಿಗೆ ಬಂದನು ಎನುತಲಿ ಕೇಳಲು| ಎಲ್ಲರು ನಡೆದರು ನೋಡಲಾಗಿ 2 ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ| ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3 ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ ನಡೆದರು ಸಂಭ್ರಮದಿಂದ4 ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ ದೇಹದ ಬಿಟ್ಟು ನಡೆದಳು 5 ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು| ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6 ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ| ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7 ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು| ಮುನ್ನಿನ ದೋಷವ ಕರಗುವ ಪರಿಯಲಿ| ಪುಣ್ಯ ಸಾಮಗ್ರಿಯ ಮಾಡಿದರಂದು 8 ಕಂಡಾ ಪರಿಯ ರೂಪವಾ| ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ |ಭಕ್ತವತ್ಸಲ ದೇವನು ಪಮಕ್ಕಳ ಚೆಂಡಿಕೆ ಮರದ ಕೊನೆಗೆಕಟ್ಟಿ|ಗಕ್ಕನೆ ಕೃಷ್ಣ ಚೆಪ್ಪಾಳಿಕ್ಕಿದನಮ್ಮ ಅ.ಪಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು |ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ||ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು |ಉನ್ನತವಾದ ವೃಕ್ಷವನೇರಿದನೆ ರಂಗ 1ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ |ಎಷ್ಟು ಸ್ವಾತಂತ್ರ್ಯವೆಗೋಪಿ||ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು |ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ 2ಸಡಗರದಿಂದ ಗೋವಳಿತಿಯರೊಡಗೂಡಿ |ನುಡಿಸುತ ಕೊಳಲನು ಪುರದೊಳಗೆ ||ಕಡೆವ ಮಡದಿಯರ ಕೈ ಪಿಡಿದಾಡುವ |ಒಡೆಯನೆ ನಮ್ಮ ಶ್ರೀಪುರಂದರವಿಠಲ 3
--------------
ಪುರಂದರದಾಸರು
ಸಿಕ್ಕಿರೆನ್ನ ಕೈಗೀಗ ಇನ್ತಕ್ಕೊಳ್ಳಿ ಸೀರೆಯ ಬೇಗ | ಎಲೆ ಸಿಕ್ಕಿ ಪಬೀದಿಯೊಳಗೆ ನಿಮ್ಮ ಮೈಗೆ ಸರಿಸಿ ನಾ |ಹೋದರೆ ಮುಟ್ಟಿದನೆಂದು ||ಬೈದು ಯಶೋದೆಗೆ ಪೇಳಿ ಕೊಲ್ಲಿಸಿದ್ದ- |ಕ್ಕಾದುದು ನೋಡಿರಿ ಇಂದು1ಹುಡುಗರೊಡನೆ ನಾನಾಡುತ ಬಂದರೆ |ಬಡಿಯಲಿ ಹವಣಿಸಲಿಲ್ಲೇ ||ಕುಡಿಯಲು ಪಾಲ್ ಬಾಯ್ತೆರೆದು ಬೇಡಿದರೆ |ಕೊಡದಲೆ ನೂಕಿಸಲಿಲ್ಲೆ 2ಬಚ್ಚಲೊಳಗೆ ಮೈದೊಳೆವಲ್ಲಿಗೆ ಬಂದ |ನಚ್ಚುತನೆಂಬುವಿರಲ್ಲೇ ||ಬಚ್ಚದೆ ಬತ್ತಲೆ ಅಡವಿಯೊಳಿರುವದು |ಹೆಚ್ಚಿದು ಅಹ ಅಲ್ಲಲ್ಲೇ 3ಬೆಳ್ಳಕೆ ದಾರೋ ಕಾಣಿಸುತಿಹರು |ಇಲ್ಲಿಗೆ ಬಂದರೆ ಹೇಗೆ ||ಸುಳ್ಳಲ್ಲವೆ ನಿಮ್ಮಂಣರಾಣೆ |ಇನ್ನೆಲ್ಲಿಗೆ ಹೋಗುವಿರೀಗೆ 4ಒಂದೊಂದೇ ನಿಮ್ಮಾಟವು ಮನಸಿಗೆ |ತಂದರೆ ಕೋಪವು ಘನ್ನ ||ಇಂದಿರೇಶ ಪ್ರಾಣೇಶ ವಿಠಲ ಗತಿ- |ಯೆಂದಿರೆ ವಂದಿನಕನ್ನಾ5
--------------
ಪ್ರಾಣೇಶದಾಸರು