ಪರಸುಖಕರಾ ಗುರುಬೋಧಸಾರಾ
ಮರಣಾ ಜರಾ ದುರಿತಾದಿ ದೂರಾ ಪ
ಜೀವಭಾವವಾ ಸಟೆಯಾಗಿ ಗೈವ
ದೇವಭಾವನಾ ಬಗೆಸಿನಿಲಿಸುವಾ
ಸಾವಿನಂಜಿಕೆ ದೂರಾಗಿ ಮಾಳ್ಪ
ಜೀವಂತಮುಕುತಿ ಕರದೀಯುವಾ 1
ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ
ದೃಶ್ಯವಸ್ತುವಿಂದ ಬೇರೆನಿಸುವಾ
ಶಾಶ್ವತಾದ ಆ ಪದ ತೋರಿ ಮನದ
ಕಶ್ಮಲವನು ಕಳೆವ ಭವತಾರಕಾ 2
ಭೇದಭಾವವಾ ಛೇದಿಸುತ ಮನದಿ
ಬೋಧನಾರಾಯಣನ ಕೃಪೆ ಪೊಂದಿದಾ
ಬೋಧರೂಪ ಗುರುವು ಪೇಳಿರ್ದ ಬೋಧ
ಸಾಧು ಶಂಕರಾರ್ಯ ತಾನೆನ್ನುವಾ 3