ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾರಾಧ್ಯನೆ ಬಂದು ನಿಲ್ಲೊ ಪ ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ- ನೆಂದು ಕರೆಯಲೋ ಗೊವಿಂದ ಅ.ಪ ಜಲದೊಳಾಡುವ-ಕಲ್ಲಹೊರುವ ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ ವನಳಿವಗೋವನೆ ಕಾಯ್ದ ಮರೆವ ನಿನ್ನಯ ರೂಪವಾ ಸಲಿಲ ಹೊಕ್ಕು ಅಸುರನ ಸಂಹರಿಸಿ ಕಲಕಿಶರಧಿಯ ಸುಧೆಯನು ತರಿಸಿ ನೆಲಗಳ್ಳನ ಮದವನೆ ಮರ್ದಿಸಿ ಚೆಲುವಚೆಳ್ಳುಗುರಿನಿಂದುದರವ ಛೇದಿಸಿ ಸುಲಭದಿಂದ ಶುಕ್ರನ ಕಣ್ಮರಿಸಿ ಬಲುಕೊಬ್ಬಿದ ಕ್ಷತ್ರಿಯರನೊರೆಸಿ ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ ಲೀಲೆಯಿಂದ ವ್ರಜನಾರಿಯರೊಲಿಸಿ ಸಲೆದಿಗಂಬರರೂಪವ ಧರಿಸಿ ಮಾಧವ 1 ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ ಎಲ್ಲವೇದವನುದ್ಧರಿಸಿ ವಾರಿಧಿಯಲಿ ತಳೆದು ಅಮೃತಮಥನಕೆ ಶಿಲೆಯ ಝಲಿಸಿ ನಿಲಸಿದೆ ನಿಜಕೆ ಧರಣಿಯ ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ ಬಿಲ್ಲನೆತ್ತಿ ವರಿಸಿದೆ ಸೀತೆಯ ಮಲ್ಲರ ಮಡುಹಿ ತೋರಿದೆ ಚರಿಯ ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2 ನಿಗಮತಂದಿತ್ತೆ ನಗವಾನೆ ನೆಗವಾ ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ ಎಂದೆನಿಸಿ ಮೆರೆವ ನಿನ್ನಯ ರೂಪವಾ ಪೊಗಲಳವೇ ಭೂಧವ ನಿಗಮಕಾಗಿ ನೀ ತಮನ ಮರ್ದಿಸಿ ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ ಹಗೆಯ ಹಿರಣ್ಯನ ಅಸುವನೆ ಹರಿಸಿ ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ ಆ ಗರ್ವಿಸಿದರಸರ ಪರಶುವಿಂದ ವರೆಸಿ ಯಾಗರಕ್ಷಣೆಗೆ ನೀ ರಕ್ಷಕನೆನಿಸಿ ನೀಗಲು ಕುರುಕುಲ ಕಲಹವೆಬ್ಬಿಸಿ ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ ಬೇಗ ಬಂದು ಹಯವೇರಿ ಮೆರೆವ- ಬೇಗದಿ ತೋರೋ ಶ್ರೀಪಾದವಾ 3
--------------
ಉರಗಾದ್ರಿವಾಸವಿಠಲದಾಸರು
ಬಾಯಿ ತೆರೆದ ಬಗಿಯೇನೊ ದೇವದೇವ ತೋಯಜದಳ ನೇತ್ರನೆ ನೀಯೆನಗಿದು ಪೇಳೈ ನಿಜವಾಗಿ ಲಕ್ಷ್ಮೀನಾ ರಾಯಣ ನರಸಿಂಹನೆ ಪ ಅಸುರನ ಉದರವ ಹಸನಾಗಿ ಬಗೆವಾಗ ಬಾಯ ತೆರೆದಿಯಾ ಬಿಸಜ ಭವಾಂಡವು ಬಸುರೊಳಗಿದ್ದ ಉ- ಬ್ಬಸಿಗೆ ಬಾಯ ತೆರೆದಿಯೊ 1 ಮಡದೀಯ ರೂಪಕ್ಕೆ ಮರುಳಾಗಿ ಅದರಿಂದ ಬಿಡದೆ ಬಾಯ ತೆರೆದಿಯಾ ದೃಢದಿ ಪ್ರಹ್ಲಾದನ ಒಡೆಯ ರಕ್ಷಿಸೊ ನುಡಿಗೆ ಬಾಯ ತೆರೆದಿಯೊ 2 ಗುರು ಸತ್ಯಬೋಧರಾಯರ ನಿತ್ಯಭಜನೆಗೆ ಬರಿದೆ ಬಾಯ ತೆರೆದಿಯೊ ವರ ಕದರುಂಡಲಗಿ ಹನುಮಯ್ಯನೊಡೆಯನೆ ಕರವ ಮುಗಿವೆ ಕರುಣಿಸೊ 3
--------------
ಕದರುಂಡಲಗಿ ಹನುಮಯ್ಯ
ಯದುರ್ಯಾರು ನಿಲ್ಲುವರೋ ಹನುಮರಾಯಾ ನಿನಗೆದುರ್ಯಾರು ನಿಲ್ಲುವರಯ್ಯಾ ಈ ಜಗತ್ರಯದಿ ಪ ಮದನ ಶರಾರ್ಬತ [?] ಕದನ ಕರ್ಕಶ ಧೀರಮಣಿಯೇ ಅ.ಪ. ಜನನಿಯ ಜಠರದಿ ಜನಿಸಿದಾಗಲೆ ದಿವಮಂಡಲಕೆ ಹಾರಿದೆ ಮಾಡಿ ದುರಂಧರನೆನಿಸಿದೆ 1 ದುರುಳ ದುಶ್ಶಾಸನನ ರಕುತವ ಹೀರಿ ಕರುಳು ಬಗೆವಾಗ ಮಾರಿ ತಗ್ಗಿಸಿ ಕೆಲಸಾರಿದರಲ್ಲದೆ 2 ಅದ್ವೈತ ಮತವ ಗೆದ್ದು ಮದ್ಗುರು ಮುನಿಮೌನಿರಾಮಾ 3
--------------
ಮಹಾನಿಥಿವಿಠಲ
ಸಂತಚರಿಯ ಗೂಢಾ | ತಿಳಿಯದು | ಭ್ರಾಂತರಿಗಿದು ನೋಡಾ ಪ ವೇಷವ ಸಂತರು ದೋರುವದಿಲ್ಲಾ | ಆಶಾಪಾಶಕ ಶಿಲಕುವರಲ್ಲಾ 1 ಹೊರಗಾಚರಿಯು ಲೋಕದ ಸರಿಯಾ | ಇರುತಿಹ ಏನೇನರಿಯದ ಪರಿಯಾ 2 ವಿಷಯ ರೂಪವ ಬ್ರಹ್ಮ ಭಾವನೆ ಬಗೆವಾ | ಪರಿ ಕೇಡಿಹ ಜಗವಾ 3 ತೋರನು ವಾಗ್ವಿಸ್ತಾರ ಬಹಳಾ | ಮೀರಿನೆರಿಹಿಕೊಳ್ಳ ಡಿಂಗರ ಮೇಳಾ 4 ದಾವ ಮಾನವರೆಂದು ಸಂತರ ತಿಳಿವಾ | ರವರವ ನರಕದ ಕುಂಡದಲಿಳಿವಾ 5 ಕೋಟ್ಯಾನುಕೋಟಿಗೊಬ್ಬಿಹನು ಸಾಧು | ಸಾಟಿಲ್ಲವರಿಗೆ ಧರಿಯೊಳಗಿಂದು 6 ಮಹಿಪತಿನಂದನ ಪ್ರಭುವಿನ ದಯವಿನಾ | ಮಹಿಮೆಯ ತಿಳಿಯದು ಹೇಳಲಿನ್ನೇನಾ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರ್ಖರಾದರು ಇವರು ಲೋಕದೊಳಗೆಏಕದೈವವ ಬಿಟ್ಟು ಕಾಕುದೈವವ ಭಜಿಸಿ ಪ.ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖಗಂಟನೊಬ್ಬನ ಕೈಯಲಿಡುವವನೆ ಮೂರ್ಖನಂಟರಿಗೆ ಸಾಲವನು ಕೊಡುವಾತ ಮೂರ್ಖ - ಜಗಕಂಟಕನಾದವನು ಕಡು ಮೂರ್ಖನಯ್ಯಾ 1ಮುಪ್ಪಿನಲಿ ಹೆಂಡತಿಯ ಮಾಡಿಕೊಂಬವ ಮೂರ್ಖಸರ್ಪನಲಿ ಗಾರುಡವ ನಡಸುವನೆ ಮೂರ್ಖಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖಅಪ್ಪ ರಂಗಯ್ಯನನು ನೆನೆಯದವ ಮೂರ್ಖ 2ಸತ್ತ ಕರುವಿನ ತಾಯ ಹಾಲು ಕರೆವವ ಮೂರ್ಖಒತ್ತೆಯಿಲ್ಲದೆ ಸಾಲ ಕೊಡುವವನೆ ಮೂರ್ಖಹತ್ತೆಂಟು ಬಗೆಯಲಿ ಹಂಬಲಿಸುವವ ಮೂರ್ಖಹೆತ್ತ ತಾಯ್ ಬೈವವನು ಕಡು ಮೂರ್ಖನಯ್ಯ 3ಪಡೆದ ಮಗಳನುಮಾರಿ ಒಡಲಹೊರೆವವ ಮೂರ್ಖಮಡದಿ ಹುಟ್ಟಿದ ಮನೆಯೊಳಿರುವವನೆ ಮೂರ್ಖಬಡತನವು ಬಂದರೆ ಬಯಸಿಕೊಂಬವ ಮೂರ್ಖದೃಡಬುದ್ಧಿಯಿಲ್ಲದವ ಕಡು ಮೂರ್ಖನಯ್ಯ 4ರಾಮನಾಮವ ಸ್ಮರಿಸದಿದ್ಧಾತನೇ ಮೂರ್ಖಹೇಮವನು ಗಳಿಸಿ ಉಣದಿದ್ದವನೆ ಮೂರ್ಖನೇಮದಲಿ ಹಿರಿಯರನು ನೋಡದವ ಮೂರ್ಖ ದುರ್ನಾಮವನು ಕೊಂಬಾತ ಕಡು ಮೂರ್ಖನಯ್ಯ 5ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖಭೂಸೂರರಿಗನ್ನವನು ಕೊಡದವನೆ ಮೂರ್ಖಶೇಷಪತಿ ಕೃಷ್ಣನ ನೆನೆಯದವ ಮೂರ್ಖಹರಿದಾಸನಾಗಿರದವನು ಕಡು ಮೂರ್ಖನಯ್ಯ 6ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖಕೊಂಡೆಯವ ಪೇಳಿ ತಿರುಗುವವ ಮೂರ್ಖಪುಂಡರೀಕಾಕ್ಷ ಶ್ರೀ ಪುರಂದರವಿಠಲನಕೊಂಡು ಭಜಿಸದ ಮನುಜ ಕಡು ಮೂರ್ಖನಯ್ಯ 7
--------------
ಪುರಂದರದಾಸರು