ಕಥೆಕಾರ ದೇವಿಯೆಂದು ಕಥೆಯ ಹೇಳಿದ ತೆರದಲಿಮಿತಿಯಿಲ್ಲದ ಮೃಷೆ ಸಂಸಾರವದು ಇರುತಿಹುದು ಆಪರಿಯಲ್ಲಿ ಪ
ಸತಿಯಂಬುವಳಾರು ತಾವಾರುಸುತರಿಂದ ಗತಿಯಾಗುವುದೆಲ್ಲಿಮಿತಿಯಿಲ್ಲದ ಬಹುಬಂಧು ಬಳಗಗಳುಬಹರೆ ತನ್ನ ಹಿಂದಲ್ಲಿ1
ಹಗೇವಿನ ಬತ್ತವು ಬಣಬೆಯ ಸೊಪ್ಪೆಯುಬಗೆ ಬಗೆವಸ್ತುವು ತಾನೆಲ್ಲಿಬಿಗುಮಿಗೆಯಾದ ದನಕರುವುಗಳುಬರಲಿಲ್ಲವು ತಾವಂದದಲ್ಲಿ 2
ತಳ್ಳಿಗೆ ತಳ್ಳಿ ಸುಳ್ಳು ಸಂಸಾರವುತೆಗೆಲೀಯದು ಈ ಬಗೆಯೆಲ್ಲಿಎಲ್ಲಕೆ ಮಂತ್ರವು ತಾ ಚಿದಾನಂದನುಎನಲಿಕೆ ಪಾಪವು ಇನ್ನೆಲ್ಲಿ 3