ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ