ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೋ ಮನೆಗೆ ಭಾಗವತರ ಭಾಗದೇಯನೆ ಚಾರುವದನ ತಾಮರಸವ ತೋರು ಪ್ರೀಯನೆ ಪ ಹಗಲು ಇರುಳು ನೆನಹು ಬಿಡದು ಸುಗುಣ ಸುಂದರ ಬಗೆಯೊಳಿನ್ನ ಮರೆಯಬಹುದೆ ನಿಗಮಗೋಚರ 1 ಕಣ್ಣಿನಿಂದ ನಿನ್ನ ನೋಡಿ ಧನ್ಯನಾಗುವೆ ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ 2 ನಿತ್ಯತೃಪ್ತನಿನಗೆ ನಾನೇ ಭೃತ್ಯನಾಗುವೆ ನೃತ್ಯಗೈದು ಪಾಡಿ ಕೃತಕೃತ್ಯನಾಗುವೆ 3 ಶ್ರೀನಿವಾಸ ನಿನ್ನ ದಾಸ ನಾನೇನಲ್ಲವೆ ಮಾನಪ್ರಾಣಗಳಿಗೆ ದೊರೆಯು ನೀನೆಯಲ್ಲವೆ 4 ಶರಣ ಜನರ ಭರಣಗೈವ ಕರುಣಿಯಾರೆಲಾ ಹರಣ ಹರಧರದೊಳಿರುವ ವರದ ವಿಠಲಾ 5
--------------
ವೆಂಕಟವರದಾರ್ಯರು