ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಲವೊ ದೇವ ವೈಕುಂಠನಾಥಾ ನೀ ನಾರಿ ವೇಷವನು ಧರಿಸಿದ ಬಗೆ ಪೇಳೋಪ ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ ಮಿತ್ರ ಭಾವದ ಅವರ ಕೂಡಲಿಟ್ಟು ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ 1 ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ ರವನಿಡುವೆನೆಂದು ಬರಲಾಗಲೂ ಅವನೀಶ ಭವಹರ ಕೇಶವ ನೀನೆ ಗತಿ ಎನಲೂ ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ2 ಅಂದು ಮಾಡಿದ ಚರಿತೆ ಭಕ್ತಜನರು ಬಂದು ಒಂದು ದಿನ ನೋಡಿದವರಲ್ಲವೆಂದೂ ಸತಿ ವೇಷವನು ಧರಿಸಿ ತೋರಿಸಿದೆಯೊ ಪುರಂದರದಾಸರಿಗೆ ಒಲಿದ ವಿಜಯವಿಠ್ಠಲ ಚೆಲುವಾ 3
--------------
ವಿಜಯದಾಸ
ಕುಲಕೆ ತಕ್ಕ ಸ್ವರೂಪ ಚಲುವಿಗೊಪ್ಪುವ ವಿದ್ಯೆ ಕಲೆಗೆ ಸಲ್ಲುವ ಸುಗುಣ ಭಳಿರೆ ನಿಪುಣ ಕಿರುಕುಳದೆ ಕೈ ನೀಡಿ ಕರೆಕರೆಯ ತಂದೊಡ್ಡಿ ಹರಿಸವಾನುವಮೋಡಿ ವರನಗಾಡಿ ಜೂಜುಗಾರರಿಗೆರೆಯ ಮೋಜಿನೋಳ್ ಸಮನರಿಯ ಸೋಜಿಗಂ ಮಿಗೆತೋರ್ಕುಮಿನಿತುಸೊರ್ಕು ನಿಶಿಚರಾಂತಕನೆನುವ ಪೆಸರಾಂತುಮೀತೆರದ ವಿಷಮವರ್ತನದಿ ಸಂತಸವ ಪಡುವ ಪರಿಯಿದಚ್ಚರಿಯಾಗಿ ತೋರ್ಕುಮೆನಗೆ ಪರಿಪರಿಯ ಚಿಂತೆಗಾಕರಮಿದಾಗೆ ಉರಿಯುತಿಹುದೀಬಗೆಯೊಡಲ ಬೇಗೆ ವರ ಶೇಷಗಿರೀಶನೆ ಶರಣನೆನಗೆ
--------------
ನಂಜನಗೂಡು ತಿರುಮಲಾಂಬಾ
ಬಾರೋ ಮನೆಗೆ ಭಾಗವತರ ಭಾಗದೇಯನೆ ಚಾರುವದನ ತಾಮರಸವ ತೋರು ಪ್ರೀಯನೆ ಪ ಹಗಲು ಇರುಳು ನೆನಹು ಬಿಡದು ಸುಗುಣ ಸುಂದರ ಬಗೆಯೊಳಿನ್ನ ಮರೆಯಬಹುದೆ ನಿಗಮಗೋಚರ 1 ಕಣ್ಣಿನಿಂದ ನಿನ್ನ ನೋಡಿ ಧನ್ಯನಾಗುವೆ ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ 2 ನಿತ್ಯತೃಪ್ತನಿನಗೆ ನಾನೇ ಭೃತ್ಯನಾಗುವೆ ನೃತ್ಯಗೈದು ಪಾಡಿ ಕೃತಕೃತ್ಯನಾಗುವೆ 3 ಶ್ರೀನಿವಾಸ ನಿನ್ನ ದಾಸ ನಾನೇನಲ್ಲವೆ ಮಾನಪ್ರಾಣಗಳಿಗೆ ದೊರೆಯು ನೀನೆಯಲ್ಲವೆ 4 ಶರಣ ಜನರ ಭರಣಗೈವ ಕರುಣಿಯಾರೆಲಾ ಹರಣ ಹರಧರದೊಳಿರುವ ವರದ ವಿಠಲಾ 5
--------------
ವೆಂಕಟವರದಾರ್ಯರು
ಬಾರೋಮನೆಗೆ ಭಾಗವತರ ಭಾಗದೇಯನೆ ಚಾರುವದನ ತಾಮರಸವ ತೋರು ಪ್ರೀಯನೆ ಪ ಹಗಲುಯಿರಳು ನೆನಹುಬಿಡದು ಸುಗುಣಸುಂದರ ಬಗೆಯೊಳೆನ್ನ ಮರೆಯಬಹುದೆ ನಿಗಮಗೋಚರ 1 ಕಣ್ಣಿನಿಂದ ನಿನ್ನ ನೊಡಿಧನ್ಯನಾಗುವೆ ನಿನ್ನ ಚರಣಕೆನ್ನ ಶಿರದಿ ಮುನ್ನಬಾಗುವೆ 2 ನಿತ್ಯ ತೃಪ್ತನಿನಗೆ ನಾನೇ ಭೃತ್ಯನಾಗುವೆ ನೃತ್ಯಗೈದು ಪಾಡಿಕೃತಕೃತ್ಯನಾಗುವೆ 3 ಶ್ರೀನಿವಾಸ ನಿನ್ನ ದಾಸನಾನೇನಲ್ಲವೆ ಮಾನಪ್ರಾಣಗಳಿಗೆ ಧೊರೆಯು ನೀನೇಯಲ್ಲವೆ 4 ಶರಣ ಜನರ ಭರಣಗೈವ ಕರುಣಿಯಾರೆಲಾ ಹರಿಣಹರಧರದೊಳಿರುವ ವರದವಿಠಲಾ 5
--------------
ಸರಗೂರು ವೆಂಕಟವರದಾರ್ಯರು
ಮೂರು ನಾಮಗಳ ಧರಿಸಿರುವ ಕಾರಣವೇನು ಸಾರಿ ಪೇಳಲೊ ಈಗಲೆ ಪ. ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೋ ನಿನಗೆ ಈ ಮೂರು ನಾಮ ಅ.ಪ. ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು ಕರವ ಮುಗಿದು ಎದ್ದು ನೋಡಲು ನಿನ್ನ ಫಣಿಯೋಳೀ ತರವಿರಲು ಮಧ್ವಮತ ದೈವವೆಂದಿನ್ನು ತಿಳಿಯುವರೆ 1 ಮೂರುರೂಪನು ನಾನು ಮೂರು ಲೋಕಗಳಿಹವು ಮೂರು ಮಾಳ್ಪೆನು ಜಗವ ಮೂರು ಗುಣದಿ ಮೂರು ತಾಪವ ಗೆದ್ದು ಮೂರು ಮಾರ್ಗದಿ ಭಜಿಸೆ ಪಾರು ಮಾಡುವೆನೆಂದು ತೋರುವ ಸೊಬಗೊ 2 ಸಾಲದೆ ನಿನಗೆ ಸೌಂದರ್ಯಕೆ ಒಂದು ತಿಲುಕ ಪಾಲಸಾಗರಶಾಯಿ ಚಲುವಮೂರ್ತಿ ಕಾಲಕಾಲಕೆ ಜನರ ದೃಷ್ಟಿ ತಗುಲುವುದೆಂದು ಲೀಲೆಯಿಂದಲಿ ಹೀಗೆ ಧರಿಸಿದೆಯ ಪೇಳೊ 3 ಮೂರೆರಡು ಎರಡೊಂದು ಇಂದ್ರಿಯವನರ್ಪಿಸಲು ತೋರುವನು ನಿಜರೂಪ ಭಕ್ತಗೆಂದು ಸಾರುತ್ತಿದ್ದರು ವಾಯು ಅರಿಯದೆ ಭಜಿಸಿದರೆ ಮೂರುನಾಮವೆ ಗತಿ ಎನ್ನುವ ಬಗೆಯೊ 4 ಶ್ರೀಲೋಲ ಗೋಪಾಲಕೃಷ್ಣವಿಠ್ಠಲ ನಿನ್ನ ಈ ಲೀಲೆ ಬಗೆಯನು ಅರಿವವರ್ಯಾರೊ ವ್ಯಾಳಶಯನ ವೆಂಕಟೇಶ ಎನ್ನ ಮನದಿ ಕಾಲಕಾಲಕೆ ನಿನ್ನ ರೂಪವನೆ ತೋರೋ 5
--------------
ಅಂಬಾಬಾಯಿ
ಸರೋಜಲೋಚನಸುರಾರಿ ಮಥನ ಮುರಾರಿ ಮಾರಮಣ ಪುರಾರಿಮಿತ್ರಾ ನಿರೀಕ್ಷಿಸೆನ್ನ ನಿರಾಕರಿಸದಿರಿನ್ನು ಪ. ಬಲೀಂದ್ರಗೊಲಿದೆ ಬಾಗಿಲೋಳ್ನಿಂದೆ ಗೊಲ್ಲನು ನೀನಾದೆ ಬಲೀಂದ್ರ ಪೂಜಾಬಲದಿ ಜಗಮಂ ಕಳೆಯೇರಿಸಿ ಮೆರೆದೆ 1 ತಳಿರ್ದೋರಣಂಗಳ್ ಎಲೆಬಾಳೆಲೆಗಳ್ ನಳನಳಿಸುವ ಬಗೆಯೊಳ್ ಬೆಳಗುವ ದೀಪಾವಳಿಯಿಂ ಜಗಮಂ ತೊಳಗುವದೆಲ್ಲೆಡೆಯೊಳ್ 2 ಚಿತ್ತಜಪಿತ ಬಾ ಉತ್ಸವಪ್ರಿಯ ಬಾ ಸತ್ಯವಿಕ್ರಮ ನೀ ಬಾ ಬಾ ನಿತ್ಯ ತೃಪ್ತನೆ ಬಾರೈ 3 ಮದಮತ್ಸರಗಳ ಸದೆವಡೆದೇಗಳು ಸದಯನೆ ನೀ ಎಮ್ಮೊಳು ಸದನವ ಮಾಡೈ ಹೃದಯ ಪೀಠದ ಅಧಿಪತಿ ನೀನಹುದೈ 4 ಮಾಯಾಪಾಶದಿ ಗಾಯಗೊಂಡೆವು ಜೀಯ ಪಾಲಿಪುದೈ ಧೈೀಯಮಾರ್ಗದೆ ನಡೆಯಿಸು ನೀ ನಿರಪಾಯದೆ ಸತತಂ5 ಕೈಪಿಡಿದೆಮ್ಮಂ ಕಾಪಿಡು ನಲವಿಂ ತಾಪತ್ರಯ ಹರ ನೀಂ ಭೂಪಶೇಷಾದ್ರೀಶನೆ ನೋಡೈ ಶ್ರೀಪಾದದಾಸರನು 6
--------------
ನಂಜನಗೂಡು ತಿರುಮಲಾಂಬಾ
ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.ಊರೂರ ನದಿಗಳಲಿಬಾರಿ ಬಾರಿಗೆ ಮುಳುಗಿ |ತೀರದಲಿ ಕುಳಿತು ನೀ ಪಣೆಗೆನಿತ್ಯ ||ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |ಆರಾರಿಗೋ ಹಣದ ದಾನಕೊಟ್ಟು |ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |ಮಾಡಿಕೊಂಡವರ ಪೂಜೆಯನೆ ಮಾಡಿ |ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3ಮಗನ ಮದುವೆಯು ಎಂದು ಸಾಲವನು ಮಾಡಿ ನೀ |ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||ಹಗರಣವ ಪಡಿಸಿದರೆ ಸಾಲಗಾರರು ಬಂದು |ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |ತಟ್ಟನೇ ಶ್ರೀಹರಿಯ ಪದವ ನಂಬಿ ||ದಿಟ್ಟ ಪುರಂದರವಿಠಲನೆ ಎಂದರೆ |ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5
--------------
ಪುರಂದರದಾಸರು