ಇನ್ನಾದರೂ ದಯಬಾರದೇ ದಾಸನಮೇಲೆ
ಇನ್ನಾದರೂ ದಯಬಾರದೇ ಪ
ಪನ್ನಗ ಶಯನನೇ ಚೆನ್ನಕೇಶವನೇ
ನಿಂನ್ನನು ನಂಬಿದ ಶರಣನಮೇಲೇ ಅ.ಪ
ಹಲವು ಯೋನಿಗಳಲ್ಲಿ ನೆರೆ ಪುಟ್ಟಿ ಬಂದೇ
ಹಲವು ಯಾತನೆಗಳ ಸಹಿಸುತ್ತ ಬಂದೇ
ಹಲವು ರೀತಿಗಳಿಂದ ದುಃಖವ ತಿಂದೇ
ಸಲೆ ನಂಬಿ ಹರಿಗೀಗ ಶರಣೆಂದು ಬಂದೇ 1
ಸೇರಿ ಬಗೆಯುತಲಿವೆ ಪಂಚ ವ್ಯಾಘ್ರಗಳೂ
ಗಾರು ಮಾಡುತಲಿದೆ ಅಹಂ ಎಂಬ ಸಿಂಹವು
ಶೆರಿಯ ಭಜಿಸುತ್ತ ಬಲೆದಾಟಿ ಬಂದೇ 2
ಬಂಧು ಬÁಂಧವರೆಂಬ ಕ್ರೂರವರ್ಗಗಳೆನ್ನ
ತಿಂದು ಸುಲಿಯುತಲಿವೆ ವಂಚಿಸಿ ಹರಿಯೇ
ಅಂದದಿ ದೂರ್ವಾ ಪಟ್ಟಣದಿ ನಿತ್ತಿರುವಂಥ
ಸಿಂಧು ಶಾಯಿಯೇ ರಂಗ ಸಲಹೆನ್ನ ತಂದೇ 3