ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡೋ ಭ್ರಾಂತಿ ಜೀವಾ ಬಿಡೋ ಕಾಮ್ಯಸೇವಾ ಅಹಂತಾ ಮಮತ್ವ ಮಹಾಮೂಢಭಾವಾ ಪ ಜಗವನೆಲ್ಲ ಈಶ್ವರನೆ ಸೃಷ್ಟಿಸಿದ ಕೇಳೋ ಇದೋ ನಿನ್ನದೆಂಬುವದು ಏನಿಲ್ಲ ತಾಳೋ ಜಗವ ಸೃಷ್ಟಿಸಿದನಾತ ಪಾಲಿಸುವನಾತ ಇಗೋ ನಾನೆ ಪಾಲಿಸುವೆನೆನ್ನುವದು ವ್ಯರ್ಥ ಭಾರ 1 ನೀ ಧರಿಸಿರ್ದ ದೇಹವಿದ ನೀ ಸೃಷ್ಟಿಸಿದೆಯಾ ಇದೇ ರೀತಿ ಹೆರವರದು ಬಿಡು ನಿನ್ನ ಮಾಯಾ ಇದನು ಪಾಲಿಸುವನಾತನೀಶ್ವರನು ನೋಡಾ ಇದೇ ರೀತಿ ಪಾಲಿಸುವನೆಲ್ಲವನು ನೋಡಾ ಮಹಾ ವಿಶ್ವವೆಲ್ಲ ತಿಳೀ ಈಶಲೀಲಾ 2 ಜಗವ ನಾಶಗೊಳಿಸುವನು ಪ್ರಳಯದಲಿ ಈಶಾ ಮಗುಳೆ ಜಗ ಜೀವರನು ಸೃಷ್ಟಿಸುವ ತಾನೆ ಜಗದಿ ವರ್ಣವಾಶ್ರಮದ ಬಲುಕಾರ್ಯ ಪಾಶಾ ಬಗೆಯಲೀಗ ಪಶುವಿನೊಳು ತಿರುಗಿಸುವನೀಶ ಮಹಾಯೋಗಿ ಶಂಕರನ ಶರಣಾಗೋ ಜೀವಾ 3
--------------
ಶಂಕರಭಟ್ಟ ಅಗ್ನಿಹೋತ್ರಿ