ಶಿವ ಶಿವ ನಿಮ್ಮ ನಾಮ ಅಡಿಗಡಿಗೆ ಬೇಕು
ಪರಿಯಂತ ತಾನೊಂದೆ ಸಾಕು ಪ
ಜಗವೆಲ್ಲ ಶಿವ ಮಯವು ಎಂದು ಕಾಣಲು ಬೇಕು
ನಿಗಮ ದೂರನ ಹೃದಯ ದೊಳಗರಸಬೇಕು
ಬಗೆಯರಿತು ಮಾನಸದಿ ಶಿವನ ಪೂಜಿಸಬೇಕು
ನಿಗಮಾಗಮಸ್ತುತನ ಅಡಿಗೆರಗಬೇಕು 1
ಅನವರತ ಶಿವಮಂತ್ರವನು ಜಪಿಸುತಿರಬೇಕು
ತನುಮನವ ವಸ್ತುವಿನೊಳಗಿರಿಸಬೇಕು
ಘನ ಪರಂಜ್ಯೋತಿ ಸ್ವರೂಪವ ನರಿಯ ಬೇಕು
ತನುಮಯ ಚಿದಂಬರನ ಕೂಡಬೇಕು 2
ನಾನು ನಾನೆಂದೆಂಬ ಹಮ್ಮ ಬಿಡಬೇಕು
ಜ್ಞಾನಾಗ್ನಿಯಿಂದ ಜ್ಞಾನವನು ಸುಡುಲುಬೇಕು
ಪವಮಾನ ಸುತ ಕೋಣೆ ಲಕ್ಷ್ಮೀಪತಿಯ ಕಡುಮಿತ್ರನಾದ
ವನ ಪಾದವನು ಕೊಡಬೇಕು 3