ಒಲಿಸಿದ್ಹ್ಯಾಗೆ ಪೇಳೆ ಜನನಿ
ತುಲಸಿ ಹರಿಯ ಮೋಹಮಾನಿನಿ ಪ
ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆ
ಒಲ್ಲ ಸೇವಂತಿಗಿರವಂತಿಗೆ
ಎಲ್ಲ ಕುಸುಮಗಳನು ನೀ
ನಿಲ್ಲದೆ ತನಗೆ ಸಲ್ಲದೆನುವ 1
ಗಂಧ ಕಸ್ತೂರಿ ಪುನುಗು ಕೇಸರಿ
ಅಂದಮಾದ ಸುಗಂಧ ಭಾರಿ
ಚಂದದಿ ಪೂಸಲಿದರೊಳ್ನೀ
ನೊಂದಿಲ್ಲದಿನಿತು ಧಿಕ್ಕಾರೆನುವ 2
ಮಿಗಿಲಾದ ಮಣಿಮಾಲೆಯ
ಬಗೆಯದಿದನು ನಿನ್ನ ಬೇಡುವ
ನಿಗಮಾತೀತ ಶ್ರೀರಾಮ ನಿ
ನ್ನಗಲದಿರೆನೆಂಬ ಸಂತತ 3