ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ರಕ್ಷಕ ಆಪದ್ಬಾಂಧವ ಶ್ರೀಪತಿ ಕೇಶವ ಮಾಧವನೆ ಪ ಮದನ ಗೋಪಾಲನೆ ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ ಬಿಟ್ಟ ಕಂಗಳ ಮುಚ್ಚದೆ ತಿರುಗುವ ಬೆಟ್ಟವ ಬೆನ್ನಿನೊಳಾಂತಿರುವ ಗಟ್ಟಿನೆಲವ ಕೆದರುತ ಬೇರರಸುವ ಹೊಟ್ಟೆಯ ಕರುಳನೆ ಬಗೆದಿರುವ1 ಪೊಡವಿಯ ಬೇಡುತ ಕೊಡಲಿಯ ಪಿಡಿಯುತ ಪೊಡವಿಪರೆಲ್ಲರ ಗೆಲಿದವನೆ ಮಡದಿಯನರಸುತ ಕಡಲನು ಕಟ್ಟುತ ಕಡಹಲ್ದ ಮರನೇರ್ದ ಮೃಡಸಖನೆ2 ಬುದ್ಧನಾಗಿ ತ್ರಿಪುರರ ಗೆಲಿದವನೆ ಶುದ್ಧ ಹಯವನೇರಿ ಮೆರೆದವನೆ ಹದ್ದುವಾಹನವೇರುತ ನಲಿದಾಡುವ ಪದ್ಮನಾಭ ಪುರುಷೋತ್ತಮನೆ3 ಅಗಣಿತ ಮಹಿಮನೆ ಖಗವರವಾಹನ ನಿಗಮವೇದ್ಯ ನಿರ್ಮಲಚರಿತ ಬಗೆಬಗೆಯಿಂದಲಿ ಭಜಿಸುವ ಭಕುತರ ಅಘನಾಶನ ಸುಜನರ ಪ್ರಿಯ 4 ಸೌಮ್ಯ ವತ್ಸರದಿ ಸುಂದರಶ್ಯಾಮನ ಸಾಮಗಾನಲೋಲನ ಭಜಿಸಿ ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ
ತುಂಬಿ ಬೆಳಗುತಿರುವಿಯಂತೆ ಎ ನಗೆ ಕಾಣದ ಬಗೆಯಾಕಂತೆ ಪ ಜಗವನು ವ್ಯಾಪಿಸಿ ಬಗೆಬಗೆಯಿಂದಲಿ ಝಗಿಝಗಿಕಪೆಂಬಾನಂತ ಸ್ಮøತಿಗಳಿವೆ ಅ.ಪ ಸರಸಿಲಿ ಸ್ಮರಿಸಲು ಬಂದಂತೆ ತರುಣಿಯ ಸಭೆಯೊಳು ಕಾಯ್ದಂತೆ ಕರೆಯಲು ಕಂಬದಿ ಹೊರಟಂತೆ ತರಳಗೆ ಅಡವಿಲಿ ಒಲಿದಂತೆ ಅರಿತು ವಿಚಾರಿಸಿ ನೋಡಲಿವೆಲ್ಲ ನಿನ್ನ ಖರೆ ಪರತರಮಹಿಮ 1 ಅರಣ್ಯವಾಸಿಗಳ ಪರೀಕ್ಷಂತೆ ಅರಿತು ಪರುಷ ಕರುಣಿಸಿದಂತೆ ಚರಣದ್ವೊರೆಯ ತಮ್ಮನಂತೆ ಸ್ಥಿರಪಟ್ಟವನಿಗೆ ಕಟ್ಟ್ದಂತೆ ವರ ವೇದೋಕ್ತಿಗಳರಿತು ನೋಡಿದರೆ ಸ್ಮರಿಸುವ ಭಕುತರ ನಿರುತ ಚಿಂತಾಮಣಿ 2 ಪೊಡವಿಪಾಲನಿಗೆ ಶಾಪಂತೆ ಬಿಡದೆ ಚಕ್ರದಿಂದ ಕಾಯ್ದಂತೆ ಕಡಲ ಮಧ್ಯದಲಿ ಮನೆಯಂತೆ ದೃಢಕರಿಗೆ ಮೈ ನೆರಳಂತೆ ಕಡುದಯಾನಿಧಿ ಎನ್ನೊಡಲೊಳು ಬಿಡದಂತಿರಿಸಯ್ಯ ಒಡೆಯ ಶ್ರೀರಾಮ 3
--------------
ರಾಮದಾಸರು
ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿ ತಾನಾಗಿ ಶ್ರೀರಾಘವೇಂದ್ರಯತಿ ಒಲಿದ ಪ ಪೋರತನದವನು ಎರೆಡು ತೆರೆಗಳಲ್ಲಿ ದೂರಾಗಿ ಮೊರೆಯು ಅಲ್ಲವೆಂದು ಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿ ಧೀರ ತಾ ಕರವನು ಪಿಡಿದ ಬಳಿಕ 1 ಜಗದೊಳಗೆ ಪದಾರ್ಥಗಳು ಗುಣದಿ ಭುಂಜಿಸುವಂಗೆ ಅಗದಂಕರನು ತಾನು ಬಳಿಗೆ ಬಂದು ಬಗೆಬಗೆಯಿಂದಲಿ ಸುರಸ ಪದಾರ್ಥಗಳು ಸೊಗಸಾಗಿ ಉಣಿಸಲು ಚಿಂತೆಯುಂಟೆ2 ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆ ಕರ್ಣಧಾರನು ತಾನೆ ಬಂದು ನಿಂದು ತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟು ಫೂರ್ಣಿಸಲು ಅವನಿಗೆ ಚಿಂತೆಯುಂಟೆ 3 ತನ್ನಯ ಹಿತವು ತಾ ವಿಚಾರಿಸಲವಂಗೆ ಚನ್ನಾಗಿ ಪರಮ ಗುರು ತಾನೆ ಬಂದು ಸನ್ಮಾರ್ಗವನು ತಾನೆ ಪೇಳುವೆನೆನಲು ಇನ್ನು ಆಯಾಸವುಂಟೆ ಅವನಿಗೆ 4 ಏಸು ಜನ್ಮದಲಿ ಅರ್ಚಿಸಿದೆನೊ ನಾ ಇನ್ನು ಪಾದ ಪದುಮ ಲೇಸಾಗಿ ಈ ಸುಕೃತದಿಂದೆನ್ನ ಹರಿದಾಸ ಈ ಸುಗುಣ ಗುರುರಾಯ ಎನಗೆ ಒಲಿದ 5
--------------
ವ್ಯಾಸತತ್ವಜ್ಞದಾಸರು
ನಾರಾಯಣ ಹರಿಗೋವಿಂದ ನಾರದವರದ ಮುಕ್ಕುಂದಾ ಪ ಸುಜ್ಞಾನಿಗಳಾದವರ ಮಾನಸಾಂತರದಿ ಮಹಿಮೆಯು ತೋರುತ ನಾನಾಪರಿಯಲಿ ನಟನೆಯು ಮಾಡುವಾ 1 ಸುಂದರ ವಿಗ್ರಹ ಸುಜನರ ಪೋಷಕನಂದನಂದನ ವಂದಿತ ಮುನಿಜನಾಮಂದರಧರ ಮಾನದ ಜಗದ್ಭರಿತಾ ಅಮಿತ ಪರಾಕ್ರಮ ಮೂರ್ತಿ ಆಗರ ದ್ವಾರಕ ಹರಿಪುರ ಸ್ಥಳವು ಭಾಗೀರಥಿಪಿತ ಭವ ವಿಮೋಚನ ಕೃಷ್ಣ ನಾಗಶಯನ ಶ್ರೀನಿಲಯನ 2 ಪುಂಡರೀಕಾಕ್ಷ ಶ್ರೀ ಪಾಂಡವ ಪಕ್ಷಕ ಪಂಡಿತ ರಕ್ಷಕ ಪರಮಾತ್ಮನೆ ಹಿಂಡೂ ದೈತ್ಯರ ಕುಲ ಚಂಡಾನೆ ಭೇರಿಸಿ ಭೂಮಂಡಲವನಾ ಳ್ವಂಥ ಮಹಿಮ ಪ್ರಕಾಶ 3 ಅಗಣಿತ ಚರಿತ ಅನಂತನಿನ್ನಾ ಬಗೆಬಗೆಯಿಂದಲಿ ಭಜಿಸುವ ಭಕುತರ ಆಘಗಳ ಖಂಡಿಸುವಾ ಹರಿ 'ಹೊನ್ನವಿಠ್ಠಲ ' 4
--------------
ಹೆನ್ನೆರಂಗದಾಸರು
ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ ನಿಮ್ಮ ಚರಣ ಬಿಡೆ ಪ್ರಭುವೇ ಪ ಜ್ಞಾನಿಗಳರಸನೇ ಶ್ರೀ ರಾಘವೇಂದ್ರಾ ಕಳೆಯುವೆ ಶ್ರೀ ರಾಘವೇಂದ್ರಾ 1 ನಿಮ್ಮನ್ನು ಸ್ತುತಿಪೆನಾ ನಿಮ್ಮ ಪದಸೇವಿಪೆನಾ ಕಾಲ ಶ್ರೀ ರಾಘವೇಂದ್ರಾ 2 ಘನ್ನ ಗುಣಮಣಿ ಶ್ರೀ ರಾಘವೇಂದ್ರಾ | ಬಗೆಬಗೆಯಿಂದಲಿ ಸ್ತುತಿಸಿ ಬೇಡುವೆ ಪ್ತಭುವೆ ತಡ ಮಾಡದಲೆ ಕಾಯೊ ಶ್ರೀ ರಾಘವೇಂದ್ರಾ 3
--------------
ರಾಧಾಬಾಯಿ