ಕಷ್ಟಗಳ ಪರಿಹರಿಸೊ ಶ್ರೇಷ್ಠ ಮಾರುತಿಯೇ
ಭ್ರಷ್ಟನಾದೆನು ಭಂಡ ಸಂಸಾರದಲ್ಲೀ ಪ
ಸ್ವಾರ್ಥವೆನ್ನುವ ದುಃಖ ಸಾಗರದಿ ಮುಳುಗಿದ್ದು
ಸ್ವಾರ್ಥಕೋಸುಗ ಹೀನ ಕೃತ್ಯಗಳ ಗÉೈದೂ
ಅರ್ಥವನು ಗಳಿಸುತ್ತ ತುಂಬಿದೆನು ಈ ವಡಲ
ವ್ಯರ್ಥವಾಯಿತು ಜನ್ಮ ಸಾರ್ಥವನು ಮಾಡೋ1
ನಿರುತದೀ ಧರ್ಮ ಕರ್ಮಗಳ ತೊಲಗಿದೆನು
ಭವದಿ ಸುಖವೆಲ್ಲವೂ ಮಾಯವಾಯಿತು ದೇವಾ
ಶರಣರಿಗೆ ತಂದೆ ನೀನೆಂದು ಮೊರೆಹೊಕ್ಕೇ 2
ಪರಹಿತವ ಬಯಸದಲೆ ಕೇಡು ಬಗೆದೆನು ನಿತ್ಯ
ಪರಸತಿಯಪೇಕ್ಷಿಯಲಿ ನಿರುತನಾಗಿದ್ದೇ
ಅರಿತೆನೀಗಲೆ ನಾನು ಸರ್ವ ನಶ್ವರವೆಂದು
ನರಹರಿಯ ನೀರೆರೆಯೊ ಈ ಬಾಡು ಶಶಿಗೇ 3
ಭಕ್ತವತ್ಸಲನೆಂಬ ಬಿರುದ ಪೊತ್ತಿಹೆ ನೀನು
ಭಕ್ತಿಯಲಿ ನಾ ನಿಂನ ಸೇವೆ ಮಾಡುವೆನು
ಭಕ್ತದಾಯಕಯಂನ ಹಸಿವೆ ತೃಷೆಗಳ ನೀಗಿ
ಮುಕ್ತಿಯನು ನೀಡೆನಗೆ ಚನ್ನಕೇಶವನೇ 4