ಜಯ ವಾಯು ಹನುಮಂತ ಜಯ ಭೀಮ ಬಲವಂತ ಪ
ಜಯಪೂರ್ಣ ಮತಿವಂತ ಜಯ ಸಲಹೊ ಸಂತ ಅ.ಪ.
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂದು ಲಂಘಿಸಿ ಖಳರ ವನ ಭಂಗಿಸಿ ಸೀತೆ-ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ 1
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಅರಿಬಲವ ಕುಟ್ಟಿಉರಗ ಬಂಧನದಿಂದ ಕಪಿವರರು ಮೈಮರೆಯೆಗಿರಿಯ ಸಂಜೀವನವ ತಂದು ಬದುಕಿಸಿದೆ 2
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿಶ್ರೀ ಪಾರ್ಥಸಾರಥಿಯ ಭಜಕ ನೀನಾದೆಪಾಪಿ ಮಾಗಧ ಬಕ ಕೀಚಕ ಹಿಡಿಂಬಕರಕೋಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ 3
ಧsÀುರದಲಿ ದುರ್ಯೋಧನನ ಬಲವನು ತರಿದೆಅರಿತು ದುಶ್ಶಾಸನನ ಒಡಲನ್ನು ಬಗೆದೆಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆಹರಿಯ ಕಿಂಕರ ಧುರಂಧರಗಾರು ಸರಿಯೆ
ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನುಬಲಿಸಿ ಶ್ರೀಹರಿಯ ಗುಣಗಳನು ಮರೆಸಿಕಲಿಯನನುಸರಿಸಲು ಗುರುವಾಗಿ ಅವತರಿಸಿಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ