ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಾಥ ರಕ್ಷಕ ಆಪದ್ಬಾಂಧವ ಶ್ರೀಪತಿ ಕೇಶವ ಮಾಧವನೆ ಪ ಮದನ ಗೋಪಾಲನೆ ಮಾತರಿಶ್ವಪ್ರಿಯ ಹರಿ ಶ್ರೀಶ ಅ.ಪ ಬಿಟ್ಟ ಕಂಗಳ ಮುಚ್ಚದೆ ತಿರುಗುವ ಬೆಟ್ಟವ ಬೆನ್ನಿನೊಳಾಂತಿರುವ ಗಟ್ಟಿನೆಲವ ಕೆದರುತ ಬೇರರಸುವ ಹೊಟ್ಟೆಯ ಕರುಳನೆ ಬಗೆದಿರುವ1 ಪೊಡವಿಯ ಬೇಡುತ ಕೊಡಲಿಯ ಪಿಡಿಯುತ ಪೊಡವಿಪರೆಲ್ಲರ ಗೆಲಿದವನೆ ಮಡದಿಯನರಸುತ ಕಡಲನು ಕಟ್ಟುತ ಕಡಹಲ್ದ ಮರನೇರ್ದ ಮೃಡಸಖನೆ2 ಬುದ್ಧನಾಗಿ ತ್ರಿಪುರರ ಗೆಲಿದವನೆ ಶುದ್ಧ ಹಯವನೇರಿ ಮೆರೆದವನೆ ಹದ್ದುವಾಹನವೇರುತ ನಲಿದಾಡುವ ಪದ್ಮನಾಭ ಪುರುಷೋತ್ತಮನೆ3 ಅಗಣಿತ ಮಹಿಮನೆ ಖಗವರವಾಹನ ನಿಗಮವೇದ್ಯ ನಿರ್ಮಲಚರಿತ ಬಗೆಬಗೆಯಿಂದಲಿ ಭಜಿಸುವ ಭಕುತರ ಅಘನಾಶನ ಸುಜನರ ಪ್ರಿಯ 4 ಸೌಮ್ಯ ವತ್ಸರದಿ ಸುಂದರಶ್ಯಾಮನ ಸಾಮಗಾನಲೋಲನ ಭಜಿಸಿ ಕಾಮ್ಯಕರ್ಮಗಳ ತ್ಯಜಿಸಲು ಹರುಷದಿ ಕಮಲನಾಭ ವಿಠ್ಠಲ ಒಲಿವ 5
--------------
ನಿಡಗುರುಕಿ ಜೀವೂಬಾಯಿ