ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯುದೇವರ ಸ್ತೋತ್ರ ಲಾಲಿ ಲಾಲಿ ತ್ರಿಭುವನ ಪಾವನ ಲಾಲಿ ಪ ಅಂಜನದೇವಿಯ ಕಂದಗೆ ಲಾಲಿಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ||ಅಂಜದೆ ಅಸುರರ ಕೊಂದಗೆ ಲಾಲಿಸಂಜೀವನ ಗಿರಿ ತಂದಗೆ ಲಾಲಿ 1 ಕುಂತಿಯುದರದಿ ಬಂದಗೆ ಲಾಲಿದಂತಿಯ ಗಗನಕ್ಕೆ ಒಗದಗೆ ಲಾಲಿ ||ಭ್ರಾಂತನ ಉದರವ ಬಗೆದಗೆ ಲಾಲಿಚಿಂತಾಮಣಿ ಭೀಮರಾಯಗೆ ಲಾಲಿ 2 ಸೋಹಂ ಎಂಬರ ತರಿದಾಗೆ ಲಾಲಿ ದಾ-ಸೋಹಂ ಎಂಬರ ಪೊರೆದಗೆ ಲಾಲಿ ||ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿಸ್ನೇಹದಿ ಭಕತರ ಪೊರೆವಗೆ ಲಾಲಿ 3
--------------
ಮೋಹನದಾಸರು
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು