ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜಭವಸತಿ ಕರುಣಿಸು ಸನ್ಮತಿ ಹರಿ ಸ್ಮರಣಾಭಿರತಿ ಪರಮ ಕೃಪಾಕರೆ ವರದಾಭಯಕರೆ ನೀನಹುದೌ ಸುಕರೆ ಪ. ಸತ್ಯವೆನಗಿದು ಉತ್ತಮಾಂಗವು ಭಕ್ತಿಯೆ ಫಾಲಸ್ಥಲವು ಉತ್ತಮೋತ್ತಮ ವಿನಯಮೆಂಬುದೇ ನಾಶಿಕವದು ನಿಜವು 1 ಆನನ ವಿದರೋಳ್ ತಾನಾಗಿರೆ ವೇದವೆ ವದನವು ಮಾನಸಕತಿ ಸುಖವು 2 ಬಗೆಗೊಳ್ಳುವ ನಿನ್ನೀ ಬಗೆಬಗೆ ರೂಪವ ಬಗೆಬಗೆದಾನೆವೇಂ ಸೊಗಸಿತೆ ನಿನ್ನೀ ಬಗೆ ಸೇವೆಗೆ ನಿನ್ನಣುಗರ ವರಿಸೆನುವೇ 3 ದೇಶಸೇವೆಯೊಳಾಶಿಸುತಿರುವೆಮಗಾಶ್ರಯತರು ನೀನೇ ಭಾಷಾಮಾನಿನಿ ಬಲಗೊಂಬೆನು ನಿನ್ನನೆ ಶೇಷಗಿರೀವರನಾಣೆ 4
--------------
ನಂಜನಗೂಡು ತಿರುಮಲಾಂಬಾ