ಕಾಯವ ನೆರೆನಂಬಿ ಕೆಡದಿರು ಮಾಯೆಯ ತಿಳಿದೇಳು ಪ.
ನ್ಯಾಯವನರಿಯದೆ ನೀ ಮಾಯಾಮೋಹವೆ
ಹೇಯಕಾರ್ಯರಿದೊಳಪಾಯದಿ ನರಳುವ ಅ.ಪ.
ತನುಮನಕನಕವಿದು ನಿತ್ಯದಿ ತನದಾಗಿಹುದೆಂದು
ಹೊನ್ನು ಮಣ್ಣು ಹೆಣ್ಣೆಂಬೀ ಮೂರರ ಬಣ್ಣದೆ ಬಗೆಗೆಟ್ಟು
ಕಣ್ಣು ಕಾಣದೆ ಮುಂಬರುತಿಹ ಭಿನ್ನವನೆಣಿಸದೆಯೆ
ಸಣ್ಣತನದಿ ಜೀವನ ವ್ಯರ್ಥವೆನಿಸುವ 1
ಸುಜನರ ಸಂಗತಿ ತ್ಯಜಿಸಿ ಮದದಲಿ ಕುಜನರ ಕೂಟವ ಬಯಸಿ
ಋಜುಮಾರ್ಗವ ತೊರೆದು ಕಾಲವ ಅಜಗರನಂದದಿ ಕಳೆದು
ಗಜಪತಿ ವರದನ ಪದಪಂಕಜ ಮಹಿಮೆಯ
ನಿಜವರಿಯದೆ ದುರ್ಜೀವನವೆನಿಸುವ 2
ನೀರಗುಳ್ಳೆಯ ತೆರದಿ ಕರಗುವ ಸಾರವಿಲ್ಲದ ಭವದಿ
ಮೂರುದಿನದ ಬಾಳೆಂದು ನೆನೆಯದೆ ಹಾರಾಡುವರೇ ನಿಂದು
ಮಾರಪಿತನ ಪದಸಾರಸವನು ನೆನೆ [ನೆನೆದು]
ನೀರ ಶೇಷಗಿರಿವರನೆÀ ಗತಿಯೆನೆ 3