ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜಿಸಿ ಬದುಕೆಲೋ ಮಾನವ ಶ್ರೀಹರಿನಾಮ ತಾರಕಮಂತ್ರವ ಪ. ದುರಿತಕೋಟಿಗಳಂ ಪರಿಹರಿಸಿ ನಿಜಪದ ಸರಸೀರುಹದೊಳಗಿರಿಸಿ ಪೊರೆವನ 1 ದುರ್ಜನ ನಿಂದೆಗೆ ಲಜ್ಜಿತನಾಗದೆ ದುರ್ಜನ ದಮನನ ಧ್ಯಾನದೇ ನೀಂ 2 ಪೊಗಳಲು ಹಿಗ್ಗದೆ ತೆಗಳಲು ತಗ್ಗದೆ ಬಗೆಕುಂದದೆ ಸಮ್ಮೋದದೇ ನೀಂ 3 ಅಷ್ಟಮದಂಗಳ ಕಟ್ಟುತೆ ದೃಢದಿ ದೃಷ್ಟಿನಿಲ್ಲಿಸಿ ನಿಷ್ಠೆಯೋಳ್ ನೀಂ4 ದೋಷರಹಿತ ಶ್ರೀಶೇಷಗಿರೀಶನ ದಾಸರವಾಸನೆನ್ನಿಸಿ ಸಂತತಂ 5
--------------
ನಂಜನಗೂಡು ತಿರುಮಲಾಂಬಾ