ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥಾತ ಎಂಥಾತನೋ ನಮ್ಮಯ ರಂಗ ಎಂಥಾತ ಎಂಥಾತನೋ ಪ ಎಂಥಾತ ಎಂಥಾತ ಚಿಂತಾಯಕ ಭಕ್ತ ರಂತರಾತ್ಮಕ ಲಕ್ಷ್ಮೀಕಾಂತ ತ್ರಿಲೋಕ ಕರ್ತ ಅ.ಪ ದಿವನಿಶಿಯಾಗಿಹ್ಯನೋ ತಾನೆ ತ್ರಿ ಭುವನವ ಬೆಳಗುವನೋ ಸವಿಯದ ಮಹಿಮರಲವಬಿಡದ್ವೇದ ಒಂದೇ ಸಮನೆ ಪೊಗಳುತಿರೆ ಇವನು ಕಾಣದಲಿಹ್ಯ 1 ತಿಥಿ ವಾರ ಪಕ್ಷ ತಾನೇ ತಾನೆ ಮಾಸ ನಿತ್ಯ ತಾನೇ ಶ್ರುತಿತತಿ ಯತಿಗಳು ಸತತ ಪೊಗಳುತಿರೆ ಮತಿಗೆ ನಿಲುಕದಂಥ ಅತಿ ಚರಿತ್ರನಿವ 2 ನಗುವಳುವರಲಿ ಈತನೇ ನಿಂತುಕೊಂಡು ಸಿಗಿವ ಬಗಿವರಲೀತನೇ ನಿಗಮಾತೀತನ ಮಹಿಮದ್ಹಗರಣ ತಿಳಿಯದು ಸುಗುಣ ಸಂತರೊಶ ಜಗದಯ್ಯ ಶ್ರೀರಾಮ 3
--------------
ರಾಮದಾಸರು