ನಸು ನಗುತ ನಿಂತ ಬಗೆಯು ಪ
ತಿಳಿದು ಪೂಜೆಯು ಮಾಡುವ ಭಕುತರನು
ಬಳಿಗೆ ಕರೆವುದು ತೀವ್ರವೊ
ಖಳಕುಲದ ಜನರು ಬರಲು ಹೋಗೆಂದು
ಕಳುಹುವ ಬಗೆಯ ಏನೊ ಕೃಷ್ಣ 1
ಸುಳಿದ ಜನಗಳ ಕೂಡ ಸುಂಕವನು
ಸೆಳೆಕೊಂಬ ಬಗೆಯು ಏನೊ
ಕೆಳದಿಯರ ಬಂದವರನಾ ಮೋಹಿಸಿ
ಕೊಳಲನೂದುತಲಿ ನಿಂದಿಯೊ ಕೃಷ್ಣ 2
ಬಲಿಯ ಕಾಯಿದ ಬಗೆಯಲಿ ದಾಸರನ
ಚಲಿಸದಲೆ ಕಾವ ಬಗಿಯೊ
ನೆಲೆ ವಾಸುದೇವವಿಠಲ ಭಕುತನ್ನ
ಸಲಿಗೆ ಬಿನ್ನಪ ಸಲಿಪುದೊ 3