ತೋರುವನೂ | ದಯ ದೋರುವನೂ||
ಭಕ್ತರಿಗೆ | ದಯ| ದೋರುವನು ಪ
ತೋರುತಲವರನು | ಪರಿಪರಿವಿಧದೊಳು
ಪೊರೆಯುವನೂ | ಹರಿ | ಮೆರೆಯುವನೂಅ. ಪ
ಆದಿಯೊಳಾ| ತಮನೆಂಬಾಸುರನನು ||
ಭೇದಿಸಿ ವೇದವ ತಂದವನು ||
ಮೋದದಿ ಗಿರಿಯನು | ಕೂರ್ಮವತಾರದಿ |
ಸಾಧಿಸಿ ಬೆನ್ನೊಳು ಪೊತ್ತವನು 1
ಧರಣಿಯ ಕದ್ದೊಯ್ದಸುರನ ಬಗಿಯಲು |
ವರಾಹವತಾರವ ತಳೆದವನು||
ನರಮೃಗರೂಪದೊ| ಳುದಿಸುತ ಕಂಬದಿ|
ವರ ಪ್ರಹ್ಲಾದನ ಪೊರೆದವನು 2
ಬಲಿಯೊಳು ದಾನವ |ಬೇಡುತ ಮೂರಡಿ|
ಯೊಳಗಿಳೆಯನು ತಾನಳೆದವನು||
ಭಾರ್ಗವನೂ ಭೃಗು ಮೊಮ್ಮಗನು| 3
ಶರಣಗೆ ಲಂಕಾ| ಪುರದೊಡೆತನವನು|
ಸ್ಥಿರವಾಗಿತ್ತಿಹ ರಾಘವನು||
ತುರುಗಳ ನಿಕರವ ಪೊರೆದವನು 4
ಬೌದ್ದವತಾರವ | ಧರಿಸಿದ ಮಹಿಮನು|
ಕಲ್ಕಿಸ್ವರೂಪದಿ ಮೆರೆಯುವನು||
ಶ್ರಧ್ದೆಯೋಳವನನು | ಭಜಿಸಲು ಮುದದಲಿ |
ಅಬ್ಧಿವಾಸ ಮೈದೋರುವನು 5
ಮಧುವನದಲಿ ಧ್ರುವ | ತಪವಾಚರಿಸಲು |
ಮುದದೊಳು ಧ್ರುವಪದವಿತ್ತವನು |
ಸುದತಿಯು ಮೊರೆಯಿಡ | ಲಕ್ಷಯ ಸೀರೆಯ |
ಇತ್ತವನೂ ದಯವಿತ್ತವನು6
ಶೇಷಗಿರೀಶನು | ದಾಸರಿಗೊಲಿದವ |
ರಾಸೆಯ ಸಲಿಸಿದ | ಶ್ರೀವರನು ||
ಶೇಷಶಯನ ಹರಿ | ದಾಸದಾಸನೆ |
ನ್ನಾಸೆಯನೂ ತಾನೀಯುವನು 7
ಪಂಕಜನಾಭನು | ಪರಮಪವಿತ್ರನು |
ಕಿಂಕರಜನಪರಿಪಾಲಕನು ||
ಶಂಕಚಕ್ರಂಗಳ ಧರಿಸಿದ ಶ್ರೀಪತಿ |
ವೆಂಕಟೇಶ ದಯದೋರುವನು 8