ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರ ಸಂಗವನಾ | ದಾಸರ ಸಂಗವ ಬೇಡುವೆ ನಾ | ಹರಿದಾಸರ ಸಂಗವನಾ ಪ ದಾಸರ ಸಂಗವ ಬೇಡುವೆ ನಾನಿನ್ನಾ | ಅನುದಿನ ಲೇಶನಿಸೀ ವಾಸುದೇವಚ್ಚುತ ಹರಿಯಂದು ನೆನೆಯುತ | ಹೇಸಿ ಜನರ ಮನಿ ಆಶೆಯ ಜರಿದಾ 1 ತಾಳ ಮೃದಂಗ ವೀಣಾದಿಯ ಸುಜನರ | ಮೇಳದಿ ಶ್ರೀಹರಿ ಚರಿತವನು | ಹೇಳುತ ಕೇಳುತ ಆನಂದ ಬಾಷ್ಪದಿ | ಆಳಿಯ ಹರುಷದಿ ತನುವನೆ ಮರೆವಾ 2 ವಂದ್ಯರು ಎಂದರಾನಂದವ ಬಡುತಲಿ | ಇಂದಿರೇಶನ ವಲುಮೆಯಂತಿಹದೋ | ಎಂದು ಮನದೊಳು ಸಂದೇಹ ಬಗಿಯದೆ | ವಂದಿಸಿ ಮುಂದಕ ಬಂದಪ್ಪಿಕೊಳುವಾ 3 ಸರ್ವರೊಳಗ ಹರಿ ಇರ್ವನು ಯನುತಲಿ | ಉರ್ವಿಲಿ ನಿಂದೆಯ ಜರಿದಿಹನು | ಗರ್ವವ ಹಿಡಿಯದೆ ಬಾಗಿದ ಭಕುತಿಯ | ಸುರ್ವಸಾರಾಯದ ಪರ್ವವನುಂಬಾ 4 ನಡಿಲೇಸು ನುಡಿಲೇಸು ಹಿಡಿದ ನೆರೆಲೇಸು | ಭವ ನಿಲ್ಲದು | ಸಾರಥಿ | ದೃಢದಲಿ ಕಂಡು ನನಗಿದೆ ಲೇಸು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು