ಮಾಧವ ನಮ್ಮ ಶ್ರೀಧವ
ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ
ನಿರುತ ನೀರೊಳು ನಿಂದ ಈತ
ಚಾರು ನಿಗಮಗಳ ತಂದ ಬಲು
ಭಾರ ಪೊತ್ತನು ಬೆನ್ನಲಿಂದ ಆಹ
ಕೋರೆದಾಡೆಯಲಿಂದ ಘೋರದೈತ್ಯನ ಸಂ
ಹಾರವ ಮಾಡಿ ಭೂಭಾರವನಿಳುಹಿದ 1
ಅರಮನೆಕಂಬದಲಿಂದ ಕಡು
ಘೋರ ರೂಪವ ತಾಳಿ ಬಂದ ಮಹ
ದುರುಳನುದರ ಬಗಿದುಕೊಂದ ಆಹ
ಧರೆಯನೀರಡಿ ಮಾಡಿವ ದನುಜನ ತುಳಿದು
ಚರಣದಾಸರ ಮನದೊರವಿತ್ತು ಸಲಹಿದ 2
ವೀರತನದಿ ಕೊಡಲಿಪಿಡಿದ ಧರೆಯ
ಸಾರಕ್ಷತ್ರಿಯಮೂಲವಳಿದ ದೇವ
ಧಾರುಣಿಯೊಳು ನರನಾದ ಅಹ
ತೋರಿ ವಿಪಿನವಾಸ ಮೀರಿದಸುರನ ಕೊಂದು
ಮೂರುಲೋಕದ ಕಷ್ಟ ದೂರಮಾಡಿದ ಶೂರ 3
ಗೊಲ್ಲಕುಲದಿ ಜನಿಸಿದ ಪುಂಡ
ಬಿಲ್ಲಿನಾಟವ ರಚಿಸಿದ ವೀರ
ಖುಲ್ಲ ಕಂಸನ ಮದ ಮುರಿದ ಆಹ
ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ
ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4
ಸಾರಿಬತ್ತಲೆ ಕದಲಿದ ಪರಮ
ನಾರಿಯರ ವ್ರತ ಭಂಗಿಸಿ ಮೆರೆದ
ಮೂರುಪುರದ ಗರ್ವಮುರಿದ ಆಹ
ಪಾರುಮಾಡಿದ ಸುರರ ಘೋರಕಂಟಕದಿಂದ
ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5