ಒಟ್ಟು 14 ಕಡೆಗಳಲ್ಲಿ , 1 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಕ ಕೇಳೆ ಪಾಪಮಾಡಿ ಲೆಕ್ಕವಿಲ್ಲದೆ ಯಮನ ಕೈಯ್ಯದುಃಖದಲ್ಲಿ ನರಕದೊಳಗೆ ಮುಳುಗುವವರ ಕಡೆ ಹಾಯ್ವುದೆಂತೋ ಪ ನೀರಗುಳ್ಳೆಯೆಂದು ತನುವ ನಿತ್ಯವಲ್ಲವೆಂದು ತಿಳಿಯರುಘೋರ ನೀಚತನವ ಮಾಡುವವರ ಕಡೆ ಹಾಯ್ವದೆಂತೋ1 ಹಿಂದೆ ಮುಂದೆ ನುಡಿಯುತಿಹರು ನಿಂದೆ ಮಾತನಾಡುತಿಹರುಸಂದೇಹಕ್ಕೆ ಒಳಗಾದವರು ಕಡೆ ಹಾಯ್ವದೆಂತೋ ಕೊಟ್ಟ ಸಾಲವನ್ನೇ ಕೊಡರು ಮತ್ತೆ ಆಣೆ ಎಂಬರಯ್ಯಹೆತ್ತ ಮಗನನು ದಾಟುವವರು ಕಡೆ ಹಾಯ್ವದೆಂತೋ 3 ತಂದೆ ತಾಯಿ ಹೊರಡಿಸುವರು ತಂದು ಒಳಗೊಳಗೇ ತಿನ್ನುವವರುಮಂದಿಗಳ ಬಯ್ಯುವವರು ಕಡೆ ಹಾಯ್ವದೆಂತೋ4 ವಿಧ ವಿಧದ ದೇವರನ್ನು ಮುದದಿ ಕಟ್ಟಿಕೊಂಡಿಹರುಚಿದಾನಂದ ಬಗಳೆಯ ಅರಿಯದವರು ಕಡೆ ಹಾಯ್ವದೆಂತೋ5
--------------
ಚಿದಾನಂದ ಅವಧೂತರು
ಎಲ್ಲ ತಾಪತ್ರಯದ ಚಿಂತೆ ಬಗಳಗೆ ಹತ್ತಿಹುದುಸೊಲ್ಲು ಸೊಲ್ಲಿಗೆ ನೆನೆವ ಚಿಂತೆ ಎನಗೆ ಹತ್ತಿಹುದು ಪ ಮಡದಿ ಸುತರು ಮನೆಯ ಪಶುವು ಬಗಳೆಗೆ ಹತ್ತಿಹುದುಷಡು ಚಕ್ರಂಗಳ ಭೇದಿಪುದೆಲ್ಲಾ ಎನಗೆ ಹತ್ತಿಹುದುಕೊಡು ಕೊಳ್ಳುವುದು ಹಾಕುವುದೆಲ್ಲಾ ಬಗಳೆಗೆ ಹತ್ತಿಹುದುಎಡೆದೆರಪಿಲ್ಲದೆ ನಾದವ ಕೇಳುವುದೆನಗೆ ಹತ್ತಿಹುದು 1 ನಿತ್ಯ ನಿತ್ಯದ ಪರಾಮರಿಕೆಯು ಬಗಳೆಗೆ ಹತ್ತಿಹುದುಮತ್ತೆ ಭ್ರೂಮಧ್ಯದ ಅರಿವೆಯ ಹುಚ್ಚು ಎನಗೆ ಹತ್ತಿಹುದುಬಿತ್ತಿ ಬೆಳೆಯುವುದು ಮಳೆಯಿಲ್ಲೆಂಬುದು ಬಗಳೆಗೆ ಹತ್ತಿಹುದುಎತ್ತೆತ್ತಲು ತಾ ಬೆಳಕ ನೋಡುವುದು ಎನಗೆ ಹತ್ತಿಹುದು 2 ಭಕುತರ ಬದುಕನು ಹಸನು ಮಾಡುವುದು ಬಗಳೆಗೆ ಹತ್ತಿಹುದುಭಕುತಿಯ ಶರಧಿಲಿ ಮುಳುಗಾಡುವುದು ಎನಗೆ ಹತ್ತಿಹುದುಸದಾ ಕಾಲವು ಕಾದಿರುತಿಹುದು ಬಗಳೆಗೆ ಹತ್ತಿಹುದುಚಿದಾನಂದ ಶ್ರೀ ಬಗಳೆಯ ಭಜಿಪುದು ಎನಗೆ ಹತ್ತಿಹುದು 3
--------------
ಚಿದಾನಂದ ಅವಧೂತರು
ಗೆಳೆತನ ಹಿಡಿದನೆ ಬಗಳೆಯ ಕೂಡೆಗೆಳೆತನ ಆರಿಗೂ ದೊರಕದತನಯ ಸತಿಯು ಧನವೆಂಬುದ ಸೇರದಜನನ ಮರಣಕೆ ಹೊರತಾದ ಪ ಎನ್ನ ಕಾಲು ಬಗಳೆ ಕಾಲಾಗಿಎನ್ನ ಹಸ್ತ ಬಗಳೆ ಹಸ್ತವಾಗಿಎನ್ನ ಬುಜ ಬಗಳೆ ಬುಜವಾಗಿಎನ್ನ ಕಣ್ಣೇ ಬಗಳೆ ಕಣ್ಣಾಗಿ 1 ಎನ್ನ ದೇಹವು ಬಗಳೆ ದೇಹವಾಗಿಎನ್ನ ಇಂದ್ರಿಯ ಬಗಳೆ ಇಂದ್ರಿಯವಾಗಿಎನ್ನ ಮನವು ಬಗಳೆ ಮನವಾಗಿಎನ್ನ ಜೀವ ಬಗಳೆ ಜೀವವಾಗಿ 2 ನಾನೇ ಬಗಳೆಯಾಗಿ ಬಗಳೆಯೇ ನಾನಾಗಿನಾನು ನೀನು ಎಂಬೆರಡುಳಿದುಜ್ಞಾನ ಚಿದಾನಂದ ಬ್ರಹ್ಮಾಸ್ತ್ರ ತಾನಾಗಿತಾನೇ ತಾನಾದ ಗೆಳೆತನವ 3
--------------
ಚಿದಾನಂದ ಅವಧೂತರು
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ಖಳರನು ತರಿವಾ ಬಗಳಾಂಬೆಗೆಕಮಲದಾರತಿ ಬೆಳಗಿರೆ ಪ ಅರಿ ಎಂಬ ಶಬ್ಧವು ಕಿವಿಗೆ ಬೀಳಲುಸರಿದವು ಸರಿದವು ಖಡ್ಗದಿಂ ಕೆಂಗಿಡಿಭರದಿಂದರಿಯನೆ ತುಡುಕಿಯೆ ಮುಂದಲೆತರಿದಳಾಗಲೆ ತಲೆಯ ಬಗಳಾಂಬೆಮುರಿದಳಾಗಲೆ ತಲೆಯ ಬಗಳಾಂಬೆ1 ಕಡಿಯುತ ಅವುಡನು ಅರಿಯನು ದೃಷ್ಟಿಸಿಝಡಿಯುತ ಮುದ್ಗರ ಹಿಡಿದು ನಾಲಗೆಮೃಡಹರಿ ಬ್ರಹ್ಮರು ಅಹುದಹುದೆನೆಹೊಡೆದಳಾಗಲೆ ಅರಿಯ ಬಗಳಾಂಬಪುಡಿಯ ಮಾಡಿದಳರಿಯ ಬಗಳಾಂಬ 2 ಕಾಲಲಂದುಗೆ ಗೆಜ್ಜೆ ಕಂಠಾಭರಣವುಮೇಲೆ ಸರಿಗೆವೋಲೆ ಮೂಗುತಿ ಹೊಳೆಯಲುಲೋಲ ಚಿದಾನಂದ ರೂಪಿಣಿ ಬಗಳೆಯುಪಾಲಿಸಿದಳು ಭಕ್ತರ ಬಗಳಾಂಬಲಾಲಿಸಿದಳು ಭಕ್ತರ ಬಗಳಾಂಬ 3
--------------
ಚಿದಾನಂದ ಅವಧೂತರು
ಗುಣವಂತರ ಗುಣವ ಗುಣವಂತನರಿವನುಗುಣಹೀನ ಗುಣವಂತನ ಗುಣವೇನ ಬಲ್ಲನೋ ಪ ಕಮಲಗಳ ಹೃದಯ ಭ್ರಮರಕ್ಕೆ ತಿಳಿಯುವುದುಕಮಲಗಳ ಗುಣ ಕಪ್ಪೆಗೇನು ತಿಳಿವುದೋವಿಮಲರಾ ಹೃದಯ ವ್ಯುತ್ಪನ್ನರಿಗೆ ಹೊಳೆಯುವುದುಕುಮತಿಗಳಿಗೆ ಕೋಮಲರ ಘನತೆಯೆಂತರಿವುದೋ 1 ಕೆಚ್ಚಲೊಳಿರುತಿಹುದು ಕರುವಿಗೆ ದೊರಕುವುದುಕೆಚ್ಚಲ ಕಚ್ಚಿರುವ ಉಣ್ಣೆಗದು ದೊರೆವುದೋಸಚ್ಚರಿತ್ರರ ಬೋಧೆ ಸತ್ಪುರುಷಗಂಟುವುದುಹುಚ್ಚ ತಾ ಬದಿಯಿದ್ದರೆ ಪರಿಣಾಮವೇನಹುದೋ 2 ಸಾಧುಗಳ ಮಹಿಮೆಯ ಸಾಧುಗಳ ಹೃದಯವುಸಾಧುಗಳ ಬೋಧೆಯ ಸಾಧು ಸಹವಾಸಬೋಧ ಚಿದಾನಂದ ಬಗಳೆಯಾದವರಿಗರಿವುವಾದಿಯಾಗಿಹ ಮೂರ್ಖರಿಗೆ ಗುಣವೇನು ತಿಳಿಯುವುದೋ 3
--------------
ಚಿದಾನಂದ ಅವಧೂತರು
ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ 1 ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು 2 ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು 3
--------------
ಚಿದಾನಂದ ಅವಧೂತರು
ದೂರಹವು ದೂರಹವು ದುರಿತಗಳೆಲ್ಲಕ್ರೂರ ಸ್ತಂಭಿನಿ ಬಗಳೆ ಸ್ಮರಣೆ ಮಾತ್ರದಲಿಪಕಳ್ಳರಡಕಟ್ಟಿದಲ್ಲಿ ಕಾರಾಗೃಹದಲ್ಲಿಗುಲ್ಲಾದ ಸ್ಥಳದಲ್ಲಿಘನಗಾಳಿಯಲ್ಲಿಎಲ್ಲ ರೋಗಗಳಲ್ಲಿ ಚಿಂತೆಗಳು ಮುತ್ತಿದಲ್ಲಿಬಲ್ಲ ಬಗಳೆಯ ಸ್ಮರಣೆ ನಾಲಗೆಗೆ ಬರಲು1ಮಾರಿದುರ್ಗಿಯಲ್ಲಿ ಮಹಾಗ್ರಹವು ಹಿಡಿದಲ್ಲಿಮಾರಣವು ಮುಟ್ಟಿದಲ್ಲಿ ಮಹಾಕಾರ್ಯದಲ್ಲಿಊರು ಮುತ್ತಿದಲ್ಲಿ ವಸ್ತು ಹೋಗಿದ್ದಲ್ಲಿಕಾರಣ ಬಗಳೆ ಸ್ಮರಣೆ ನಾಲಗೆಗೆ ಬರಲು2ಮಳೆಯೊಳು ಸಿಕ್ಕಿದಲ್ಲಿ ಸಾಯ್ವಸಮಯದಲ್ಲಿಹೊಳೆಯೊಳು ಮುಳುಗಿದಲ್ಲಿ ಹೊಲ ಬೆಳೆಯದಲ್ಲಿ ಬ-ಹಳದಾರಿದ್ರ್ಯದಲ್ಲಿ ಬೇಗೆ ಸುತ್ತಡಸಿದಲ್ಲಿಬಲು ಚಿದಾನಂದ ಬಗಳೆ ಸ್ಮರಣೆ ನಾಲಗೆಗೆ ಬರಲು3
--------------
ಚಿದಾನಂದ ಅವಧೂತರು
ಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳಪಭಸ್ಮಾಸುರನಾಗ ಜಗವರಿಯೆ ಬೇಕೆಂದುಗೌರಿಯನು ಮೋಹಿಸಿಯೆವಿಸ್ಮಯದಲಿ ವಿರೂಪಾಕ್ಷ ಭಜಿಸಿವಿಷ ಹೃದಯದಿ ಘಾತಕವನೆ ಚಿಂತಿಸೆ1ಉರಿವ ಹಸ್ತವ ಪಡೆದು ಹರುಷದಲಿ ಬರಲುಪಶು ಪತಿಯು ಭಯದಿಂದ ಓಡುತಿರಲುದೇವತೆಗಳೆಲ್ಲರೂ ಸ್ತೋತ್ರ ಗೈಯೆಶಿವನನು ಕಾಯಲವತರಿಸಿದೆ ದೇವಿ2ಥಳ ಥಳಿಸುತ ಮೋಹದಿಂದಿರಲುತವಕಿಯು ಹರುಷದಿ ಕೈ ಹಿಡಿದು ಬರಲುಕಳರಿದ ಶಿವ ಪ್ರಾಣ ಉಳಿಯಲೆಂದುತಾಮಸನ ನಾಟ್ಯದಲಿ ಗೆಲಲು ಎಂದೆ3ಧಿಮ್ಮಿ ತತ್ತಧಿಕಿತಕ ಎಂದುದಿಟ್ಟವಾಗಿ ಕುಣಿಯುತಲಂದುಸುಮ್ಮನೆ ಕೈಯಲಿಡಿಸಿದೆ ಕೈಯಸುಟ್ಟೆಯಸುರನ ಸುರರುಘೆ ಎನೆ4ಸುರರುಹೂವಿನ ಮಳೆಯ ಸುರಿಯಲುಸುರಗಣಿಕೆಯರು ನಾಟ್ಯವಾಡಲುಪರಮಚಿದಾನಂದ ಬಗಳೆಯು ಸಾರ್ತರೆಪಾರ್ವತಿಪತಿನೋಡಿ ನಗುನಗುತಿರೆ5
--------------
ಚಿದಾನಂದ ಅವಧೂತರು
ಮರತೆ ಮರತೆ ಪ್ರಪಂಚವ ಎನಗೆ ಈಗಹರಿಯಿತು ಅಜ್ಞಾನದ ಋಣವು ಅಯ್ಯಪಸುರಪತಿಕಲ್ಪವೃಕ್ಷವು ತಾನು ಈಗಸಿರಿಗಿರಿಯನೀಗ ಬಯಸೆನು ನಾನುಪರಮಬಗಳೆ ತಾನಾಗಿಹ ನಾಶವಹಮುರುಕಿ ದೇಹ ಭ್ರಾಂತಿಯಲಿರುವೆನೆ ಕೇಳಕ್ಕಯ್ಯ1ಸತ್ಯವಾದ ಕಾಮಧೇನುವು ಅದು ಈಗಬುತ್ತಿಗೆ ಕೈ ನೀಡುವುದೇ ಕೇಳಕ್ಕಯ್ಯನಿತ್ಯಮಂಗಳೆ ಬಗಳೆಯಾಗಿಹಳು ಸ್ವಪ್ನದಿ ತೆರದಿಮಿಥ್ಯಸಂಸಾರಕೆ ಆಸೆ ಮಾಡುವೆನೆ ಕೇಳಕ್ಕಯ್ಯ2ಚಿಂತೆ ದೂರ ಚಿಂತಾಮಣಿಯನುಕ್ಷುದ್ರ ದೂರ ಕಲ್ಪವೃಕ್ಷವನು ನೆನೆವೆ ಕೇಳಕ್ಕಯ್ಯಚಿಂತಾಯಕ ಚಿದಾನಂದನಾದ ಬಗಳೆ ಇರುವಾಗಎಂತು ಜನನ ಮರಣದ ಚಿಂತೆ ಕೇಳಕ್ಕಯ್ಯ3
--------------
ಚಿದಾನಂದ ಅವಧೂತರು
ಮುಕ್ತನಾಗುವೆನಿತ್ಯಮುಕ್ತನಾಗುವೆಭಕ್ತಿಯಿಟ್ಟು ಗುರುವಿನಲ್ಲಿ ಭಜಿಸಿ ಬಗಳೆ ನೀನೆಯಾಗಿಪಮುರುಕಿ ಮೂಳಿಯರ ಜೊಲ್ಲು ಮಧುವೆಂದು ಸವಿದಂತೆಹಿರಿಯರಂಘ್ರಿ ತೀರ್ಥವನು ಕುಡಿದು ತೃಪ್ತನಾಗೋ ನೀನು1ಏಣಲೋಚನೆಯನ್ನು ನೀನು ಬಿಡದೆ ಬಿಡದೆ ನೋಡಿದಂತೆಜ್ಞಾನಿಗಳ ಮೂರ್ತಿಯನ್ನು ಘಳಿಗೆ ಘಳಿಗೆ ನೀನು ನೋಡೋ2ಕಾಮ ಕೇಳಿಗಾಗಿ ಹಲ್ಲ ಕಿರಿದು ಕಾಲಿಗೆರಗಿದಂತೆಪಾಮರೋದ್ಧಾರನಾದ ಗುರುಪದಕ್ಕೆ ಶರಣು ಹೋಗೋ3ನಾರಿಯಲ್ಲಿ ಲೋಲನಾಗಿ ನೀಚಮಾತು ಕೇಳಿದಂತೆವೀರ ಸಾಧು ತತ್ವವನ್ನು ವಿವರವಾಗಿ ನೀನು ತಿಳಿಯೋ4ಚದುರೆ ಮೇಲೆ ನಿನ್ನ ಚಿತ್ತ ಚದುರದಂತೆ ಇದ್ದ ಹಾಗೆಚಿದಾನಂದ ಬಗಳೆಯಲ್ಲಿ ನೆಲಸೆ ಚೇತನಾತ್ಮ ಶುದ್ಧನಹೆಯೋ5
--------------
ಚಿದಾನಂದ ಅವಧೂತರು
ಸತಿಸುತಗೆಷ್ಟು ತನಗೆಷ್ಟು ಮಾಡಲು ಬೇಕುಮಿತಿ ಮೀರಿ ಮಾಡಿದರೆ ಅಧೋಗತಿ ಮರುಳೆಪಅವರಸ್ವಾಸ್ತಿಯನೀಗ ಇವರಿಗೆ ಮಾಡಿದರೆಅವರು ಬಾರದೆ ಇವರು ಬಹರೇ ಮರುಳೇಅವರಾರು ಇವರಾರು ನಿನ್ನೊಳಗೆ ನೀ ತಿಳಿಯೋಜವಕರೆಯೆ ತೆರಳುವೆಯೋ ಸಂಗಡಲೆ ಮರುಳೆ1ಮನ ಕಂಡರೆ ಇಲ್ಲ ಮೋಕ್ಷ ಕಂಡರೆ ಇಲ್ಲಮಾನಿನಿಯ ಒಡವೆಯಲಿ ಚಿಂತೆ ಮರುಳೆಜ್ಞಾನಿಗಳ ಗುರುತರಿಯನಿನಗೆ ಸ್ಥಿರವೆಂತೆಂಬೆನೀನು ಹೊಗದೆನಿತ್ಯನೀನೆಂತು ಮರುಳೆ2ಕದನಮಾಡುವೀ ನಿನ್ನದೀಗ ಎನ್ನದು ಎಂದುಕದನವಾಡಲಿಕೆ ನೀನಾರೋ ಮರುಳೆಮುದಸುಖವನು ಆಗದಿರು ನೀನು ವಸ್ತಿಯಂಕುರಚಿದಾನಂದ ಬಗಳೆಯ ಚಿಂತೆಯನು ಮಾಡುತಲಿ3
--------------
ಚಿದಾನಂದ ಅವಧೂತರು