ದೇವ ದೇವ ತೋರು ದಯವ ಪ
ಕಾವದೇವ ನೀನೆ ಎನ್ನ
ಕೈಯಪಿಡಿದು ಕಾಯೊ ಅಭವ ಅ.ಪ
ಧ್ಯಾನಿಪ ಭಕ್ತ ದೀನರಭಿಮಾನಿ
ನೀನೆ ಕರುಣಿಸೊ
ದೀನಸ್ವರದಿ ಬೇಡಿಕೊಂಬೆ
ಮಾನರಕ್ಷಿಸಿ ಪೊರೆಯೊ ಜೀಯ 1
ನೀಗಿಸಲು ದುರ್ಬವಣೆಯನು
ಬಾಗಿ ನಿಮ್ಮ ಮರೆಯ ಹೊಕ್ಕೆ
ಭೋಗಿಶಯನ ಬಾಲನನ್ನು
ಬಗಲೊಳಿಟ್ಟು ಸಲಹು ಜೀಯ 2
ಭಾಮೆಮಣಿಯ ಸಮಯಕೊದಗಿ
ಪ್ರೇಮದಿಂದ ಮಾನ ಕಾಯ್ದಿ
ಸ್ವಾಮಿ ನೀನೆ ಗತಿಯು ಎನಗೆ
ಪ್ರೇಮದಿಂದ ಕಾಯೊ ಶ್ರೀರಾಮ 3