ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ
ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು |
ತ್ರಿಜಗವಂದಿತ ಗುಣಾಂಬುಧಿಯಾ ||ಆಹ||
ಪಂಕಜ ಕರ್ಣಿಕೆ ವಾಸ |
ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ.
ಮನ ಸೋಲಿಸುವ ಸುಲಲಾಟ | ಚನ್ನ |
ಫಣಿಗೆ ಕಸ್ತೂರಿನಾಮ ಮಾಟ | ನ
ಮ್ಮನು ಪಾಲಿಸುವ ವಾರೆನೋಟ |ಆಹ|
ಕನಕ ಮೋಹನ ಕುಂಡಲಾ ಕರ್ಣ
ಮಿನುಗುವ ಕದವು ಆವಿನ ಸೋಲಿಪ ನಿತ್ಯಾ1
ಭೃಂಗಕುಂತಳ ನೀಲಕೇಶ | ಹುಬ್ಬು |
ಚಾಪ ವಿಲಾಸ | ಉ |
ತ್ತುಂಗ ಚಂಪಕ ಕೋಶನಾಸ | ರಸ
ರಂಗು ತುಟಿ ಮಂದಹಾಸ || ಆಹ ||
ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ
ಕೃತಿ ತಿರುವೆಂಗಳ ಸ್ವಾಮಿಯ 2
ಪರಿಮಳವೀಳ್ಯ ಕರ್ಪೂರ | ಇಟ್ಟು |
ಜಲಧಿ ಗಂಭೀರ | ದಂತ
ಪರಿಪಜ್ಞೆ ಸಮ ವಿಸ್ತಾರ ||ಆಹ ||
ಮಿನುಗುವನಂತ ಚಂದೀರ ತೇಜಾಧಿಕ ಮುಖ
ಪರಿಪರಿ ವೇದ ಉಚ್ಚರಿಸುವ ಚತುರಾರ 3
ಬಕುಳಾರವಿಂದ ಮಲ್ಲೀಗೆ | ಅದು |
ಕುರುವಕ ಪನ್ನೀರು ಸಂಪಿಗೆ |
ಭೂಚಂಪಕ ಜಾಜಿ ಯಿರುವಂತಿಗೆ |
ಪೂಕೇತಕಿ ಮರುಗ ಶಾವಂತಿಗೆ ||ಆಹ||
ಸಕಲ ಪೂತರುವಿರೆ ವಿಕಸಿತ ಮುಕುಳಿತ
ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು4
ಕರತಾಳರೇಖೋಪರೇಖ | ಕಾಂತಿ |
ಅರುಣಸಾರಥಿ ಮಯೂಖ | ಬೇರೆ |
ಪರಿ ಶೊಭಿತ ಹಸ್ತ ಶಂಖ | ಗದೆ |
ಧರಿಸಿದ ಚಕ್ರ ನಿಶ್ಶಂಕ || ಆಹ |
ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ
ವೈಜಯಂತಿ ಮಂಜರಹೀರ ಹಾರನ್ನ5
ಕಡಗ ಕಂಕಣ ಮುದ್ರೆ ಬೆರಳ | ಪಾಣಿ |
ನಿಡಿತೋಳ ಕಕುಭುಜಿ ಕೊರಳ ಸ್ಕಂಧ
ವಿಡಿ ಸಪ್ತವರಣ ವಿಸರಳ | ಬೆನ್ನು |
ಮುಡಿಯವಿಟ್ಟ ಮಣಿಹವಳ ||ಆಹ |
ಝಡಿತದ ಪವಳ ವಡಸೀದ ಕೇಯೂರ
ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ6
ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ |
ಕೆತ್ತಿದ ಪದಕನ್ಯಾವಳ ಸುತ್ತ
ಸುತ್ತಿದ ಸನ್ಮುಡಿವಾಳ | ಇತ್ತ
ತುತಿಪ ಜನಕೆ ಜೀವಾಳ ||ಆಹ ||
ಪ್ರತ್ಯೇಕವಾಗಿ ತೂಗುತ್ತಿಹ ಸರಗಳ
ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ 7
ಕೇಸರಿ ಅಂಬರ | ಗೋರೋ
ಚನ ನಖಚಂದ ನಗಾರು | ಪೆಚ್ಚಿ |
ತೆನೆ ಮೃಗನಾಭಿ ಪನ್ನೀರ | ವೆಳ |
ಘನಪರಿಮಳ ಗಂಧಸಾರ ||ಆಹ ||
ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ 8
ತ್ರಿವಳಿ ಉಪಗೂಢ ಜಠರ | ಅಖಿ |
ಳಾವನೀ ಧರಿಸಿದಾ ಧೀರಾ | ಮೇಲೆ |
ಕುಸುಮ ಮಂದಿರಾ |
ಮೃಗದೇವ ಉಡಿನಡು ಧಾರಾ ||ಆಹ ||
ಭಾವ ಕಿಂಕಿಣಿ ತೋಳಲಿವಾಸನಾ ಬಿರು
ದಾವಳಿಕೊಂಡರು ದೈತ್ಯಾವಳಿ ಹಾರನ್ನಾ 9
ಊರು ಜಾನು ಜಂಘ ಗುಲ್ಫ | ವಿ
ಚಾರ ಶಕ್ರ ಮಾತು ಅಲ್ಪ | ಎನ್ನ
ತೋರುನೆಯ ಅಗ್ರ ಸ್ವಲ್ಪ | ಗುಣ |
ಸಾರಮಾಡಿಪ್ಪ ಸಂಕಲ್ಪ ||ಆಹ ||
ವಾರಣಕರದಂತೆ ಹಾರೈಸು ಈ ತನೂ
ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ10
ಪಾದ | ಪಾಪ
ಪಾದ | ಕಾಮ
ಪಾದ | ಬಹು
ಪಾದ ||ಆಹಾ||
ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ
ಮಾನವಗೆ ಬಂದು ಕಾಣಿಸಿಕೊಂಬನ11
ಮೃದುತಾಳಾಂಗುಲಿನಿಸಿ ಭಾಸ | ರಕ್ತ
ಪದತಳ ಧ್ವಜ ವಜ್ರಾಂಕುಶ | ಚಕ್ರ
ಪದುಮ ಚಿಹ್ನೆ | ನಿರ್ದೋಷ |
ಸುಧಿ ಸುಧ ಕಥಾಪಾಠ ಸರಸÀ ||ಆಹ||
ತ್ರಿದಶನಾಯಕ ಶಿವ ವಿಧಿಗಮುಗುಟ
ಪಾದದಲಿ ಸಮರ್ಥವಾದರು ನೋಡು ತರುವಾಯ 12
ಆಪದ್ರಕ್ಷಕ ಸುರಾಧ್ಯಕ್ಷ | ಜಗ |
ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ |
ಸ್ವಪ್ನದಲಿ ನೀನೆ ದಕ್ಷಾ | ನಗೆ |
ಆಪನ್ನರಿಗೆ ನೀನೆ ವೃಕ್ಷಾ ||ಆಹ ||
ರೂಪರೂಪಾಂತರ ವ್ಯಾಪಾರ ಮಾಳ್ಪನ್ನ
ಆಪಾದ ಮೌಳಿ ಪರಿಯಂತರ ನೀನು 13
ಹಿಂದಾಣ ಅನುಭವ ಧಾನ್ಯ | ಲೋಹ |
ತಂದು ಸಂಪಾದಿಸೋ ಜ್ಞಾನ | ಭಕ್ತಿ |
ಯಿಂದ ಮುಂದಕೆ ನಿಧಾನ | ಚಿತ್ತ |
ಯಿಂದು ಕೊಂಡಾಡೋ ಮುನ್ನೀನ ||ಆಹ||
ಬಂಧನ ಹರಿಸಿ ಆನಂದಾವ ಕೊಡುವ ಮು-
ಕುಂದ ಅನಿಮಿತ್ತ ಬಂಧು ವೆಂಕಟನಾ ನೀ14
ನಿತ್ಯ |
ನೀಲ | ಪುಣ್ಯ |
ವ್ರಜವ ಪಾಲಿಸುವ ವಿಶಾಲ | ವಿತ್ತು |
ನಿಜದೊಳಗಿಡುವ ಈ ಕೋಲ ||ಆಹ||
ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ |
ವಿಜಯವಿಠ್ಠಲರೇಯ ಗಜರಾಜವರದನ್ನ 15