ಈ ಸಾಧನೆಯ ಈ ಧರ್ಮಗಳ ಗುರಿಯೊಂದÉ ಕೇಳಿರಿ ಇಂದೇ
ಪರಮಾತ್ಮಪ್ರಾಪ್ತಿ ಇದರಿಂದೇ ಪ
ನಿಷ್ಕಾಮ ಕರ್ಮವ ಮಾಡುವನು
ನಿಷ್ಕಾಮ ಬಕುತಿಯ ಮಾಡುವದು
ಆ ವೈರಾಗ್ಯ ಆ ಸುವಿವೇಕ
ಮನದಲ್ಲಿ ಮೂಡುವದಿಂದೇ ಪರಮಾತ್ಮಪ್ರಾಪ್ತಿ 1
ವಿಷಯಾಭಿಲಾಷಾ ಬಿಡುವುದಕೆ
ಮನದಲ್ಲಿ ಸ್ಥಿರತೆಯು ನಿಲುವುದಕೆ
ಗುರು ಬೋಧೆಯಲಿ ಮನ ರಮಿಸುತಲಿ
ಜಿಜ್ಞಾಸೆ ಮೂಡುವದಿಂದೇ ಪರಮಾತ್ಮಪ್ರಾಪ್ತಿ 2
ಹಗುರಾದ ಸಾಧನವಿದಕೆಲ್ಲ
ಜಗದಲ್ಲಿ ಇರುವ ಜನಕೆಲ್ಲ
ಅಘನಾಶಕ ಶ್ರೀಶಿವಶಂಕರನೋಳ್
ಘನಪ್ರೇಮ ಬಕುತಿಯಿದೋಂದೇ ಪರಮಾತ್ಮಪ್ರಾಪ್ತಿ 3