ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ಎಲ್ಲ ಆಳ್ವಾರರು ಆಳ್ವಾರ್ ತಿರುವಡಿಗಳೆ ಶರಣೆನ್ನುತ ಬಾಳ್ವರು ಭಜಿಪುದು ಬಕುತಿಯಲಿ ಪ ಕೇಳ್ವರು ಕಥೆಗಳ ಮಮತೆಯಿಂದಲಿ ಮಾಳ್ವರು ಮನೆ ವೈಕುಂಠದಲಿ ಅ.ಪ ಮೊದಲಿನ ಮೂವರು ಮಾಧವನೆನುತ್ತ ಪದುಮನಾಭನೊಡನಾಡಿದರು ಅದುಭುತ ಮಹಿಮಾ ತಿರುಮೊಳಿಶಯ್ಯರ ಮುದದಿಂ ಶಿವ ಕೊಂಡಾಡಿದನು 1 ಮಧುರಕವಿಗಳು ನಮ್ಮಾಳ್ವಾರರ ಪದಗಳ ಪೂಜಿಸಿ ಹಾಡಿದರು ತದುಪರಿ ತಿರುವಾಯ್ಮೊಳಿಯನು ಅವರಿಂ ದಧಿಕರಿಸುತ ಹಿತವೆಸಗಿದರು 2 ಪೆರಿಯಾಳ್ವಾರರು ಹರಿಯನು ಪಾಡುತ ವರವೇದಕೆ ತಾವ್ ಮೊದಲಿಗರು ಪರಮಪಾವನೆ ಗೋದಾದೇವಿಯು ದೊರೆ ಶ್ರೀರಂಗನ ಕೈವಿಡಿದಳ್ 3 ಪೆರಿಯ ತಿರುಮೊಳಿಯ ತಿರುಮಂಗೈಯ್ಯರು ತಿರುಪ್ಪಾಣ ವಿಪ್ರನಾರಾಯಣ ತಿರುವನಂತಪುರದ ಕುಲಶೇಖರರು ಸಿರಿಯರಸನ ತೇರ ಮಾಡಿದರು 4 ಪರಮಾತ್ಮನ ಸನ್ನಿಧಿಯಿಂದಲ್ಲಿಗೆ ತೆರಳುತ ಮಹಿಮೆಯ ತೋರಿದರು ನಿರುತ ದೇವರೆಡೆ ಪೂಜೆಗೊಂಬರು ವರಜಾಜೀಶನ ಸೇವಕರು 5
--------------
ಶಾಮಶರ್ಮರು
ಈ ಸಾಧನೆಯ ಈ ಧರ್ಮಗಳ ಗುರಿಯೊಂದÉ ಕೇಳಿರಿ ಇಂದೇ ಪರಮಾತ್ಮಪ್ರಾಪ್ತಿ ಇದರಿಂದೇ ಪ ನಿಷ್ಕಾಮ ಕರ್ಮವ ಮಾಡುವನು ನಿಷ್ಕಾಮ ಬಕುತಿಯ ಮಾಡುವದು ಆ ವೈರಾಗ್ಯ ಆ ಸುವಿವೇಕ ಮನದಲ್ಲಿ ಮೂಡುವದಿಂದೇ ಪರಮಾತ್ಮಪ್ರಾಪ್ತಿ 1 ವಿಷಯಾಭಿಲಾಷಾ ಬಿಡುವುದಕೆ ಮನದಲ್ಲಿ ಸ್ಥಿರತೆಯು ನಿಲುವುದಕೆ ಗುರು ಬೋಧೆಯಲಿ ಮನ ರಮಿಸುತಲಿ ಜಿಜ್ಞಾಸೆ ಮೂಡುವದಿಂದೇ ಪರಮಾತ್ಮಪ್ರಾಪ್ತಿ 2 ಹಗುರಾದ ಸಾಧನವಿದಕೆಲ್ಲ ಜಗದಲ್ಲಿ ಇರುವ ಜನಕೆಲ್ಲ ಅಘನಾಶಕ ಶ್ರೀಶಿವಶಂಕರನೋಳ್ ಘನಪ್ರೇಮ ಬಕುತಿಯಿದೋಂದೇ ಪರಮಾತ್ಮಪ್ರಾಪ್ತಿ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಬೇಡಿಕೊಂಬೆನು ನಿನ್ನ ಮನಬಿಚ್ಚಿ ತೋರಿಸುವೆ ಪ ಪಶುವಾದ ಎನ್ನ ಮನಸು ಪಿಸುಮಾತು ಹೇಳುತಿಹುದು ತುಸುಗುಣವಿಲ್ಲ ನಿನಗಂತೆ ಬಕುತಿಯೇಕಯ್ಯ ನಿನಗೆ ಅ.ಪ ಬದುಕು ತಪ್ಪಿಸಿ ನಿಲ್ಲು ನೀನಾಗಿ ಎನ್ನುತಿದೆ ಕದಿಮೋಸ ಮನವನು ನಂಬಿ ಬಾಳುವೆನೆಂತು ಬುದ್ಧಿ ಕಲಿಸಯ್ಯ ಮನಕೆ ಬೆಳಕು ತೋರಿಸು ನಿನ್ನ ಬದ್ಧಗೆಳೆಯನಾಗಿಸು ಅದನು ಬದುಕಿ ಬಾಳುವೆನಯ್ಯ 1 ಹಿಡಿಯಾಸೆ ಎನಗುಂಟು ಗಂಟುಕಟ್ಟಿ ನಿನ್ನೊಡನೆ ನಡೆವೆ ದಿಟ್ಟತನದಲಿ ಕಮಲಾಕ್ಷ ಲಾಲಿಸಯ್ಯ ಬಿಡಲಾರೆ ನಿನ್ನನೀಗ ಬೆಳಕು ಕಂಡಿತು ಎನಗೆ ಒಡೆಯ ಶೆಲ್ವರಾಯ ನನಸು ಕನಸಾಗಿ ಮಾಡದಿರು 2
--------------
ಸಂಪತ್ತಯ್ಯಂಗಾರ್