ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ
ತಿಳಿ ಇದರಲ್ಲಿ ಬೇಡಿನ್ನು ಅನುಮಾನ
ಇದೇ ಬಕುತಿಮಾರ್ಗವೇ ಸುಲಭ ಸೋಪಾನ
ತಿಳಿ ವೈರಾಗ್ಯಜ್ಞಾನಾದಿಗಳ ತಾಣಾ ಪ
ಸಂಸಾರದೊಳಗಿರ್ದ ಜೀವಂಗೆ
ಸುಖದುಃಖದಿ ಬಳಲುವ ಮನುಜಂಗೆ
ಕಂಸಾರಿ ಶ್ರೀ ಕೃಷ್ಣನಾಮವೊಂದೇ
ಪಾಪ ಸಂಹಾರಿ ಪರಶಿವನಾಮವೊಂದೇ
ಈ ಸಂಸಾರ ದಾಂಟುವಾ ನಿಜತಾಣಾ1
ನಿಷ್ಕಾಮ ಮನದಿಂದ ಭಜಿಸಲ್ಕೆ
ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ
ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ
ಬಲು ಜಿಜ್ಞಾಸೆ ಮನದಲ್ಲಿ ಜನಿಸಲ್ಕೆ
ಈ ಪರಮಾತ್ಮಧ್ಯಾನ ಮಹಾಸಾಧನಾ 2
ಆತ್ಮಜ್ಞಾನದ ಬೋಧನೆಗೊಂಡು
ಪರಮಾತ್ಮನ ರೂಪವೆ ತಾನೆಂದೂ
ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ
ಪರಮಾತ್ಮನೆ ನಿತ್ಯನು ನಿಜವೆಂದೂ
ಪರಜ್ಞಾನವ ನೀಡಲ್ಕೆ ಈ ಸಾಧನ 3
ಪರಮಾರ್ಥನುಭವಿಗಳ ಸಂಗ
ನೆರೆದೊರಕುತಲಿರುತಿರೆ ಭವಭಂಗ
ವರ ಭಕ್ತಿ ಮಾರ್ಗದಿ ದೊರಕುವದೆಂದ
ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ
ಇದೆ ಗುರುಶಂಕರಾನಂದಕೃಪೆಯಿಂದ 4