ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೆಳಗಿರೇ ಆರತಿಯ ಮುತ್ತೈದೆರೆಲ್ಲರೂ ಕೂಡಿಬೆಳಗಿರೇಆರತಿಯ ಪ ಶ್ರೀ ಗುರು ಗಣಪತಿ ಚರಣಾರವಿಂದಕೆ ಬಾಗಿ ಮಣಿದು ಶಾರದಾಂಬಿಕೆ ಅಮ್ಮನ ಆಗಮೋಕ್ತದಿ ಪೂಜಿಸುವೆ ಚರಿತವನೀಗಳು ಕರುಣಿಸುತಿಹ ವಿಘ್ನರಾಜಗೆ ಮೊದಲ ಆರತಿಯ ಬೆಳಗಿರೆ 1 ಸರಸಿಜೋದ್ಭವನ ರಾಣಿ ಕಲ್ಯಾಣಿ ವಿದ್ಯೆಗಧಿಕಾರಿ ಸುರವಂದ್ಯೆ ಸುಪ್ರದಾಯಕಿ ಶಾರದಾಂಬಿಕೆಗೆ 2 ಶಾರದಾಂಬಿಕೆಗೆ ಹರಳಿನಾರತಿಯ ಬೆಳಗಿರೆ 3 ಬಿರು ಮುಗುಳಿನ ಚಂಪಕದಂತೆ ನಾಸಿಕ ಕದಪು ಕನ್ನಡಿಯವೇಲ್ ಲೋಕಮಾತೆಗೆ ಪರಿಮಳ ದಾರತಿ ಬೆಳಗಿರೆ 4 ಮರೆಯಲು ಗರಳಸ್ವರವು ಕೋಗಿಲೆಯಂತೆ ನಳಿದೋಳೆರಡು ಬೆರಳು ಸಂಪಿಗೆಯ ಸರಳಿರುವಂತೆ ಮೆರೆವ ಈ ಶಾರದಾಂಬಿಕೆಗೆ ಹವಳದಾರತಿ ಬೆಳಗಿರೆ 5 ಕಿರುಬಸುರಿನ ಸುಳಿನಾಭಿ ಇಟ್ಟ ವೋಲೆ ತ್ರಿವಳಿಯ ಹರಿಮಧ್ಯ ನಡುವಿಗೆ ಉಟ್ಟ ಪೀತಾಂಬರದ ಶ್ರೀ ಶಾರದಾಂಬಿಕೆಗೆ ಬಟ್ಟಲಾರತಿ ಬೆಳಗಿರೆ 6 ಮಂದಗಮನೆ ಜಗದ್ವಂದ್ಯೆಗೆರಗಿ ನಾ ಮುಂದೆ ಪೇಳುವ ಪರಿಪರಿ ವಸ್ತ್ರ ಭೂಷಣದಿಂದ ಮೆರೆವ ಮಣಿ ಮಕುಟ ಫಣಿಗೆ ಶ್ರೀಗಂಧ ಕುಂಕುಮವಿಟ್ಟ ಶಾರದಾಂಬಿಕೆಗೆ ಕುಂದಣ ದಾರತಿ ಬೆಳಗಿರೆ 7 ಪುತ್ಥಳಿ ಹಾರಹೀರಾವಳಿ ಮುತ್ತಿನಸರ ಚಿನ್ನದಸರ ಚಕ್ರಸರ ಜ್ವಲಿಸುತ್ತಲಿರುವ ಮೆರೆವ ಶ್ರೀ ಶಾರದಾಂಬಿಕೆಗೆ ಮುತ್ತಿನಾರತಿ ಬೆಳಗಿರೆ 8 ರತ್ನದಸರ ಪದಕದಸರವು ಏಕಾವಳಿಸರ ಕೊರಳೊಳಗಳ ನಳಿನ ದಾರತಿ ಬೆಳಗಿರೆ 9 ಹರಳು ಮೌಕ್ತಿಕದಿಂದ ಮೆರೆವ ಮೂಗುತಿ ಚಂದ್ರನ ಹರಳು ಚೌಲಿಯ ತುಂಬುಪರಿಮಳಿಸುವ ಪೂವು ಕರಿ ಮಣಿ ಹರಳಿನಾರತಿ ಬೆಳಗಿರೆ 10 ಮೆರೆವಚೂಡವು ಕೈ ಚಳಕಿಗೆ ಕೆತ್ತಿದ ಹರಳಿನ ವಡ್ಯಾಣ ನಡುವಿಗೆ ಅಳವಟ್ಟು ರೂಢಿಸಿ ಬಕುತರ ಪಾಲಿಪ ಶಾರದಾ ದೇವಿಗೆ ಆರತಿ ಬೆಳಗಿರೆ 11 ಥರಥರ ನವರತ್ನ ಖಚಿತದಿಂದೊಪ್ಪುವ ಕರವೆರಡರ ಭುಜ ಕೀರ್ತಿ ವಜ್ರದೊಳ್ ಬಿರಿದ ತೋಳ್ ಬಳೆವಾಲೆ ಶಾರದಾದೇವಿಗಾರತಿ ಬೆಳಗಿರೆ 12 ಚಿನ್ನದ ಕಿರುಗೆಜ್ಜೆ ಅಂದಿಗೆ ಗಿಲಿಗಿಲಿರೆನ್ನಲು ಹಾರ ಹೊಯ್ದೊಡರು ಬಿರಿಚೊಕ್ಕ ಚಿನ್ನದ ಸರಪಳಿ ಭಾರಿಗಳ ನೆಳೆವ ಸುಪ್ರಸಂಗನೆಗಾರತಿಯ ಬೆಳಗಿರೆ 13 ಪಿಲ್ಲಿಯುಕಿರು ಬೆರಳಲಿ ಮಿಂಚಿನಂತಿಹುದಿಲ್ಲಹರಳು ಮಂಚಿಕೆ ಕೊಡೆ ಹೊಳೆಯುವ ಚೆಲುವ ಕಾಲುಂಗರ ವರ ವೀರ ಮುದ್ರಿಕೆಯಲಿ ಒಪ್ಪುತಲಿಹ ಶಾರದಾಂಬಿಕೆಗೆ ಮಲ್ಲಿಗೆ ಯಾರತಿಯ ಬೆಳಗಿರೆ 14 ಭಾರಕೆ ಶಾರದೆ ಒಲಿಯುತ ದೇಹದ ಕಾಂತಿ ಯಿಂದ ದಿಕ್ಕನು ಮುತ್ತೀನಾರತಿಯ ಬೆಳಗಿರೆ 15 ಕರುಣಾಂಬೆ ಕಾಶ್ಮೀರ ಪುರವರಧೀಶ್ವರಿ ಪರಮಹಂಸವರ್ಯ ಪರಿ ಪರಿ ರುದ್ರನ ಪೋಲ್ವ ನಿಶದದುತಿ ಮೂರ್ತಿ ಪರಿಪರಿ ಆರತಿಯ ಬೆಳಗಿರೆ 16 ಪುಷ್ಪ ಧೂಪ ದೀಪಗಳಿಂದ ಸಡಗgದಿಂದಲಿ ಸಮರ್ಪಿಸಿ ಜಯ ಜಗದರೂಪೆ ರಕ್ಷಿಸು ಮಾತಾಯೆ ಕರುಣಿಸು ಎಂದು ಕಡು ಬೆಡಗಿನ ಆರತಿಯ ಬೆಳಗಿರೆ 17 ಕಡುಬು ಕಜ್ಜಾಯ ಪಾಯಸಕ್ಷೀರ ದಧಿಘೃತತಡೆಯಿಲ್ಲ ತುಂಬಿ ದೇವಿಗೆ ಕರಿಯ ಕಬ್ಬಿನ ಕೋಲು ಆರತಿಯ ಬೆಳಗಿರೆ 18 ಹರಿವಾಣ ನೇವೇದ್ಯಜಗನ್ಮಾತೆ ತಾಬೂಲವನಿತ್ತು ಶರಣೆಂದು ನೂತರದಾರತಿಯ ಬೆಳಗಿರೆ 19 ತಮ್ಮಟೆ ಭೇರಿ ಬುರುಗು ಶಂಖ ಮೃದಂಗವು ನೀಲದಾರತಿಯ ಬೆಳಗಿರೆ 20 ಭೋರಿಡುವವಾದ್ಯವು ಉಡುಕು ಕೊಳಲು ತಂಬೂರಿ ತಾಳಗಳಿಂದ ಸ್ವರವೆತ್ತಿಪಾಡಿ ಆರತಿಯ ಎತ್ತಿರೆ 21 ಬೇಡುತ ಪೂಮಳೆಗರೆಯುತ ಹೊಡೆದು ಕೊಂಡಾಡಿ ವಂದಿಸಿದರು ಶಾರದಾಂಬಿಕೆಗೆ ಹೂವಿನಾರತಿಯ ಎತ್ತಿರೆ 22 ವರದಾಂಬೆ ಶಾರದಾಂಬಿಕೆಯನು ಪೂಜಿಸಿದವರಿಗೆ ಪರಿಪರಿ ವಿದ್ಯವ ಕರುಣಿಸೆ ನರರಿಗೆ ಇಷ್ಟಾರ್ಥದ ವರವಿತ್ತು ಕೊಡುವಳು ಮರಕತದಾರತಿ ಬೆಳಗಿರೆ 23 ಹಿರಿಯಮಗನ ರಾಣಿ ಶಾರದಾಂಬಿಕೆಯ ಸುರಮುನಿ ಜನರಿಗಿಷ್ಟಾರ್ಥವ ವರವಿತ್ತು ಮಂಗಳಾರತಿಯ ಬೆಳಗಿರೆ 24
--------------
ಕವಿ ಪರಮದೇವದಾಸರು