ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿ ಪಾಡಿರೆ ಮುದ್ದು ಬಾಲಕಂದನಿಗೆ ಬಾಲಬ್ರಹ್ಮಚಾರಿಯಾದ ಕಪಿವರಗೆ ಪ. ಅಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಸಖನಿಗೆ ತುಡುಕಿ ವಜ್ರತನುವಾಗಿ ಸಂಜೀವ ತಂದು ಕಪಿಪುಂಜಗಳ ಸಲಹಿ ಮಂಜುಭಾಷಣ ರಾಮಪಾದ ದಾಸನಿಗೆ 1 ಪುಟ್ಟಿ ಕುಂತಿಯ ಉದರದಲಿ ಗಿರಿ ಒಡೆದು ದುಷ್ಟ ಕೀಚಕ ಬಕಾದಿಗಳ ಸಂಹರಿಸಿ ಕುಟ್ಟಿ ಕೌರವರ ಕುಲ ದ್ರೌಪದಿಯ ಕೂಡಿ ಪಟ್ಟವಾಳಿದ ಕೃಷ್ಣ ಪಾದಸೇವಕಗೆ 2 ಶ್ರೀಪತಿಯ ಆಜ್ಞೆಯಲಿ ವಿಪ್ರಸುತನಾಗಿ ಪಾಪಿ ದುರ್ಮತಗಳನು ತರಿದು ಮುರಿದೊಟ್ಟಿ ಸ್ಥಾಪಿಸುತ ಸಚ್ಛಾಸ್ತ್ರ ಯತಿಯಾಗಿ ಚರಿಸಿ ಗೋಪಾಲಕೃಷ್ಣವಿಠ್ಠಲನ ಮೆರೆಸಿದಗೆ 3
--------------
ಅಂಬಾಬಾಯಿ