ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾ ಕಣ್ಣೆದುರಲಿ ಕೃಷ್ಣನಾ ಪ ಕಂಡೆ ನಾನೀಗ ಬ್ರಹ್ಮಾಂಡದೊಡೆಯ ತಾ ತಾಂಡವಾಡಿ ಭೂಖಂಡದಿ ಮೆರೆದನ ಅ.ಪ ಜಯಮುನಿಹೃತ್ಕುಮುದಾಲಯದಿ ಸುಲೀ- ಲೆಯಾಡುತಿಹ ವಾಯ್ವಂತರ್ಗತ ಕೃಷ್ಣ ಜಯಜಯಜಯ ಶ್ರೀ ವಿಜಯಸಾರಥಿ ಭವ- ಭಯಹಾರಿ ಭಕ್ತರಭಯಪ್ರದಾಯಕ ದಯವನಧಿಯೆ ಮನದಾಮಯ ಕಳೆದು ನಿ- ರ್ಭಯ ದೊಳು ಕಾಯುವ ಜಗದೊಡೆಯಾ ಧೇಯವು ನಿನಗಿದು ಸದ್ಭಕುತರಾಶ್ರಯ ತಟಿತಕೋಟಿ ನಿಭಕಾಯ ಶ್ರೀಭೂಕಾಂತ ದೈತ್ಯಕೃತಾಂತ ಜಗದಾದ್ಯಂತ ನಿಂತು ಜೀವರಾದ್ಯಂತ ಕೃತ್ಯಗಳ್ ಸಂತತನಡೆಸುವ ಕಂತುಪಿತನ ನಾ 1 ಶ್ರೀಕಳತ್ರ ಪರಲೋಕೈಕನಾಥ ಜಗ- ದೇಕವಂದ್ಯನೆ ನರಲೋಕದ ಕ್ರೀಡೆಯೊಳ್ ಭೀಕರಿಲ್ಲದೆ ಬಕಶಕಟಾಕಂಸಾದಿಗಳ ಏಕಘಳಿಗೆ ಯೊಳು ನೀ ಕೊಂದು ನಲಿದು ನಿಂದೆ ಪಾಕಶಾಸನ ದಿವೌಕಸವಂದ್ಯನೆ ಪ್ರಕಟನಹುದೊ ನಿಪ್ಕುಟಿಲರಿಗೆ ದಿಟ್ಟತನದಿ ಹೃತ್ತಟದಲಿ ಧೇನಿಸೆ ತಟಿತದಂದದಲಿ ಒಳಗೇ ಭಟಜನರುಗಳಾ ಕಂಟಕದೆಡರಾಕಟಕಪರಿಹರ ವಿಟ್ಟು ಕರುಣಾಕಟಾಕ್ಷದಿಂದ ಸಂತ ವಿಟ್ಟು ನಟಿಸುವಾ ಸೃಷ್ಟಿಕರ್ತನ ನಾ 2 ರಂಗಾ ನಿನ್ನವರುಗಳಿಂಗಿತದಂತೆ ಮಾ- ತಂಗವರನ ನಿನ್ಹಾಂಗೆನಡೆಸಿ ಶುಭಾಂಗ ಸದ್ಭಕ್ತಕೃ- ಪಾಂಗ ಮಂಗಳಾಂಗ ತುಂಗಮಹಿಮ ಸ- ಪ್ತಾಂಗ ಏಕೋನವಿಂಶತಿ ಮಂಗಳವಿಶ್ವನೆ ಕಂಗಳಲಿದ್ದು ಜಗಂಗಳ ಕಾರ್ಯಂಗಳಿಗೀವೆ ಹಿಂಗಿಸಿ ಅಂಗದ ಕಾರ್ಯವ ನೀ ಮನ ಕಂಗಳಿಗಿತ್ತು ಎಂದಿಗು ಪೊರೆವಾ ಮಂಗಳ ಪ್ರಾಜ್ಞಭೋಗಂಗಳ ಪ್ರಜ್ಞ ಆಗದುಸೂಜ್ಞ ರಂಗನಾಥ ಹೃದ್ರಂಗದಿ ನಲಿಯುತ ಹಾಂಗೆ ನಿಂದಿಹ ಈ ಶ್ರೀವೇಂಕಟೇಶನ ನಾ 3
--------------
ಉರಗಾದ್ರಿವಾಸವಿಠಲದಾಸರು