ಬಿಸಜ ಕಾನಮಿಪೇ ಪ
ವಾತಸುತನೆನ್ನಿಸುತ | ಸೀತೆ ರಮಣನ ಕಂಡುಸೀತೆ ವಾರ್ತೆಯ ನರುಹಿ | ಖ್ಯಾತ ನೀನಾದೇ |ಮಾತರಿಶ್ವನೆ ಹರಿಯ | ಪ್ರೀತಿ ನಿನ್ನೊಳಗೆಂತೋಪೋತ ಭಾವ ದೊಳಾಂತೆ | ಪ್ರೀತಿ ಅಪ್ಪಿಗೆಯಾ 1
ಉರ ರಕ್ತವನು | ಕುಡಿದಂತೆ ತೋರಿ ಜಗನಡುಗುವಂತೆಸಗಿವೆಯೊ | ಕಡುಗಲಿಯ ಭೀಮಾ 2
ಸನ್ಯಾಸದಾಶ್ರಮವ ಅ | ನ್ಯಾಯದಲಿ ಗೊಂಡುಶೂನ್ಯ ಮತ ತತ್ವ ಪ್ರ | ಚ್ಛನ್ನದಲಿ ಪೇಳ್ದಾಅನ್ಯಾಯ ಕಳೆವುದಕೆ | ಜನ್ಯನಾಗುತ ಮಧ್ವಚೆನ್ನ ಪೆಸರಲಿ ಪೇಳ್ದ | ಘನ್ನ ತತ್ವಗಳಾ 3
ಆರು ಕೋಣ್ಯು ಪರಿಯಾ | ಕಾರದಲಿ ವಲಯಾಮೂರು ಕೋಟಿಯ ಸಂಖ್ಯೆ | ವಾನರಾಕೃತಿ ಬದ್ಧವೂ |ಚಾರು ಯಂತ್ರದಿ ಸೌಮ್ಯ | ದಾಕಾರದಲಿ ಜಪದಹಾರ ಪಿಡಿಯುತ ವ್ಯಾಸ | ತೀರಥಿರಿಗ್ವೊಲವೇ 4
ವಕ್ರ ಮನವನು ತ್ಯಜಿಸಿ | ಚಕ್ರತೀರ್ಥದಿ ಮಿಂದುವಕ್ರ ಬಕರಿಪು ನಿನ್ನ | ಚೊಕ್ಕ ರೂಪವ ಸೇವಿಸೀಅಕ್ರೂರ ವರದ ಗುರು | ಗೋವಿಂದ ವಿಠ್ಠಲನಅಕ್ಕರದಿ ಭಜಿಸುವಗೆ | ಚಕ್ರಿಪುರ ವೀವೇ5