ಬಿಡೆನು ನಿನ್ನಯ ಪಾದವಾ ಮುಖ್ಯ ಪ್ರಾಣ ಬಿಡೆನು ನಿನ್ನ ಪಾದಾ
ಕಡಲ ಹಾರಿದೆನೆಂಬ ಸಡಗರದಿಂದೆನ್ನ ಕಡೆಹಾಯಿಸದೆ ಬೇಗ ಪ.
ಹದಿನಾಲ್ಕು ಲೋಕದೊಳು ವ್ಯಾಪಕವಾಗಿ
ಮುದದಿಂದ ಹಂಸ ಮಂತ್ರವ ಜಪಿಸುತ
ಮಧುವೈರಿಯನು ಒಲಿಸಿ ಕಡೆಗೆ ಅಜ-
ಪದವನೈದುವಿ ಸುಖದಿ
ವಿಧುಕಳಾಧರ ವಾಸವಾದ್ಯರ ಮುದದಿ ರಕ್ಷಿಸಿ ದೈತ್ಯ ಪುಂಜವ
ವಿಬುಧ ಗಣಾರ್ಚಿತ 1
ಮತಿವಂತನಾದಮ್ಯಾಲೆ ತ್ವತ್ಪಾದವೇ
ಗತಿಯೆಂದು ನಂಬಿಹೆನು ನೀ-
ನಿತ್ತ ಶಕುತಿಯಿಂದ ಪೂಜೆಯನು ಮಾ-
ಡುತ ನಿನ್ನ ಪ್ರತಿಮೆಯ ನಮಿಸುವೆನು
ವಿತತ ಮಹಿಮನೆ ಪೂರ್ವಭವ ದುಷ್ಕøತಗಳೆನ್ನನು
ಪತನಗೊಳಿಪದನತುಳ ನೀ ನೋಡುತ್ತ
ಎನ್ನನು ಜತನಮಾಡದೆ ವಿತಥ ಮಾಳ್ಪರೆ 2
ಹಿಂದೆ ತ್ರೇತಾಯುಗದಿ ಈ ಧರಣಿಗೆ
ಬಂದು ನೀ ಕಪಿರೂಪದಿ ಅರ-
ವಿಂದ ಬಾಂಧವನನು ಸೇರಿದಿ
ಇಂದ್ರ ನಂದನನಿಂಗೆ ರಾಜ್ಯವ
ಇಂದಿರೇಶನ ದಯದಿ ಕೊಡಿಸಿ ಪು-
ರಂದರಗೆ ವರವಿತ್ತ ಬಲದಶ ಕಂಧರನ ಜವದಿಂದ ಗೆಲಿದನೆ 3
ಭೀಮನನೆನಿಸಿ ಕೀಚಕರ ನಿ-
ರ್ನಾಮ ಗೊಳಿಸಿ ಜಯಿಸಿ
ಕಿಮ್ಮೀರ ಬಕಮಾಗಧರ ಸೀಳಿಸಿ
ಸಾಮಗಾಯನ ಲೋಲಕೃಷ್ಣನ ಪ್ರೇಮ ರಸಪೂರ್ಣೈಕ ಪಾತ್ರನಿ-
ರಾಮಯನೆ ಧೃತರಾಷ್ಟ್ರತನಯಸ್ತೋಮವನು ತರಿದಮಲರೂಪ 4
ಕಡೆಯಲಿ ಕಲಿಯುಗದಿ ನೀ ಯತಿಯಾಗಿ
ಮೃಡನ ತರ್ಕವ ಖಂಡಿಸಿ ಜ್ಞಾನಾ
ನಂದಕದಲಿ ಕೃಷ್ಣನ ಸ್ಥಾಪಿಸಿ ಮಾಯಿಗಳನ್ನು
ಬಡಿದು ದೂರದಲೋಡಿಸಿ
ಪೊಡವಿಗಧಿಪತಿ ಪಾವನಾತ್ಮಕ ಒಡೆಯ ಶೇಷಾಚಲನಿವಾಸನ
ಮೆರದನೆ ತಡವ ಮಾಡದಲು 5