ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ಸಾಧನ ಲೇಸುಕಾಣಬಾರದು ಪ.
ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆಸ್ನಾನಮಾಡದೇ ಕಪ್ಪೆ ಸರ್ವಕಾಲದಲಿಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ 1
ಜಪವ ಮಾಡಿಯೆ ನಿನ್ನ ಕೃಪೆಗೊಳಗಾಗುವೆನೆನೆಜಪದಲ್ಲಿ ಮನಸ್ಸೆನ್ನಾಧೀನವಿಲ್ಲಉಪವಾಸವೇ ಉಚಿತ ಸಾಧನವೆಂಬೆನೆಉಪವಾಸವೇ ಇರದೆ ಉರಗನು ತಾ ಸರ್ವದಾ 2
ಸನ್ನ್ಯಾಸ ಸುಖಸಾಧನವು ಎಂತೆಂಬೆನೆಸನ್ನ್ಯಾಸಿಯಾಗಿರನೆ ರಾವಣನುಕನ್ಯಾದಾನವೆ ಮುಖ್ಯ ಸಾಧನವೆಂಬೆನೆಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ 3
ದುರುಳ ದುರ್ಯೋಧನ 4
ಬಂಧುತ್ವವೇ ಗತಿ ಸಾಧವವೆಂಬೆನೆಬಂಧುತ್ವವಿರದೆ ಶಿಶುಪಾಲನಿಗೆಒಂದರಿಂದುಚಿತ ಕಾಣೆ ಹಯವದನರಾಯನೆಎಂದೆಂದಿಗೂ ದಾಸನೆಂದೆನಿಸೊ5