ಭುವನ ತ್ರಾಣ ಸದ್ಭವ ಪ್ರವೀಣ ಪ
ಶ್ಲೋಕ :
ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ |
ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ ||
ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ1
ಪದ:
ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ
ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ |
ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ
ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ |
ಮಾಡಿದೆನಯ್ಯಾ | ಮುಂದೇನೋ ಉಪಾಯ 2
ಶ್ಲೋಕ:
ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು |
ಜೀವಾತ್ಮಗೆ ಪೇಳ್ವಿರೊ ||
ಶ್ರೀ ವತ್ಯಾಂಕÀನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ |
ಪದ:
ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ |
ನಾ ಭ್ರಮಿಸಿದೆ ಬುದ್ಧಿಸಾಲದೇ ||
ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ |
ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ |
ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ 2
ಶ್ಲೋಕ :
ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ |
ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು ||
ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ |
ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ 3
ಪದ:
ವನಧಿ ಲಂಕಾಪುರವ ನೈದಿದೀ||
ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ |
ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ |
ಆರ್ಭಟಿಸಿ | ರಕ್ಕಸರ ಸೀಳಿದಿ 3
ಶ್ಲೋಕ :
ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ |
ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ ||
ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ
ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ 4
ಪದ:
ಯೋಗ್ಯವ | ಬದಲು ಕಾಣದೆ ದೇವಾ
ಸದ್ಭಾವ | ನೋಡಿ | ಗಂಧಮಾದನವ |
ಭವ |
ಮೊರೆ ಐದಿವರವ 4
ಶ್ಲೋಕ :
ಸಂತುಷ್ಟನಾಗಿ ಸ್ವಯಂ |
ನಿಂತ್ಹಾಂಗೆ ನೀ ಹುಟ್ಟಿದಿ |
ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ |
ಪದ:
ಭೀಮಾಸೇನನೆಂಬುವರು |
ಧೃತರಾಷ್ಟ್ರನ್ನ ಸುತರು |
ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು ||
ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು |
ಸುರತರು | ಮೋಕ್ಷ ಮಾರ್ಗವ ತೋರು 5
ಶ್ಲೋಕ :
ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ |
ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ |
ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ |
ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ 6
ಪದ :
ದ್ರುಪದಜೆ ಎನಿಸಿದಳು |
ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು |
ಧೀರನೆನವೆ ಹೃದಯದೊಳು ಹಗ
ಲಿರುಳು | ಭಜನೆಗಳಿಪ್ಪನಂಘ್ರಿಗಳು || 6
ಶ್ಲೋಕ :
ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ |
ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ ||
ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ |
ಪದ :
ಸೂನು |
ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು |
ವರ ಪಡೆದನು | ಭಾವೀ ಶಿಷ್ಯ ನಿನ್ನನು |
ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು |
ತುರ್ಯಾಶ್ರಮವನು ಯಿನ್ನು 7
ಶ್ಲೋಕ :
ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ |
ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ ||
ಗರ್ವೋಚಿÀಸಲ್ಲೋಕಕೆ |
ಚೂಡಾಮಣಿ ಪದ:
ರಜತಪೀಠ ಪುರದಲ್ಲಿ |
ನೀ ಕಲಿಯುಗದಲ್ಲಿ |
ಇರುವಿ ಮತ್ತೊಂದರಲ್ಲಿ |
ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ8