ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣ ಬಿಟ್ಟು ನಾನಿರಲಾರೆ ಪ ನಿನ್ನ ಪಿಡಿದು ರಘು ರನ್ನದಶಾಸ್ಯ- ನನ್ನೆ ಸವಿದು ದಾನವ ಕುಲಬೇರಾ- ವನ್ನೆ ಕಿತ್ತಿ ಜಾನಕಿಯನೆ ತಂದಾ ನಿನ್ನುಳಿದಿನ್ನುಂಟೆ ಮನ್ನಿಸಿ ಕೇಳ್ವರು ಕುನ್ನಿಯ ಮಾನವರೇನು ಬಲ್ಲರು 1 ವಿಕ್ರಮ ಭೀಮನೆನಿಸಿ ದ್ವಾಪರದಿ ದುರುಳ ಮಲ್ಲರ ಭೂ- ಚಕ್ರಕಪ್ಪಳಿಸಿ ಬಕನನ್ನೇಕ- ಚಕ್ರಾಖ್ಯನಗರದಿ ಹಿಂಡಿ ಬಿಸÀುಟೆ ಕುರು- ಚಕ್ರವರ್ತಿಯ ಕುಲವಳಿದೀ 2 ಶ್ರೀಶಾನುಜ್ಞದಿ ಧರೆಯೋಳವತರಿಸಿ ಈಶಮಧ್ವನೆಂಬಭಿದಾನವ ವಹಿಸಿ ದೋಷೆನಿತಿಲ್ಲದ ಮತವನೆ ಸೃಜಿಸಿ ಈಶ ನಿನ್ನಾಣೆ ಜಗದುದ್ಧಾರ ಮಾಡಿದಿ ದಾಸನಹುದೋ ನೀ ನರಸಿಂಹವಿಠಲನ 3
--------------
ನರಸಿಂಹವಿಠಲರು