ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಭೀಮಶ್ಯಾಮಾ ಜಯ ಸತ್ಯಾವರ ಪ್ರೇಮಾ ಜಯ ಕೃಷ್ಣಾಗತ ಕಾಮಾ ಜಯ ಪುಣ್ಯನಾಮಾ ಪ. ಪಂಚಬಾಣನ ಜನಕ ಪಾಂಚಾಲೆಯನು ಕರೆದು ಪಂಚ ಮೂರುತಿಗರಿಸಿನವ ಹಚ್ಚೆನಲೂ ಪಂಚರತ್ನಗಳಿಂದ ಮಿಂಚುತ ಭಾವಿ ವಿ- ರಿಂಚಿಯ ಕಡೆಗಾಗಿ ನಡೆತಂದಳಾಗ 1 ಅಣಿಮಾದಿ ಗುಣ ಚಿಂತಾಮಣಿಯ ಹತ್ತಿರೆ ಬಂದು ಮಣಿದು ಪಾದಕೆ ನಾರಿಮಣಿ ನಸುನಗುತಾ ಝಣಝಣವೆನಿಪ ಕಂಕಣ ಶೋಭಿತದಿಂದ ಪುನುಗಿನೆಣ್ಣೆಯ ಕೂಡಿದರಿಶಿಣ ಹಚ್ಚಿದಳು 2 ಕ್ಷತ್ರಿಯ ಗಣ ಶಿರೋರತ್ನನಾಗಿರುವಿ ಸ- ರ್ವತ್ರ ವ್ಯಾಪಕ ಫಾಲನೇತ್ರ ವಂದಿತನೆ ಕೃತ್ರಿಮ ದ್ವಿಜ ಭಿಕ್ಷಾ ಪಾತ್ರ ಸಲ್ಲದು ಕಂಜ ಪತ್ರ ತೋರಿದರೆ ನಾನರಿಶಿಣ ಹಚ್ಚುವೆನು 3 ಖುಲ್ಲ ಬಕಗೆ ಭಂಡಿಯಲ್ಲಿ ತುಂಬಿದ ನಾನಾ ಪಲ್ಯ ಭಕ್ಷಗಳ ಮೇಲೆ ಚೆಲ್ಲಿದನ್ನವನು ಎಲ್ಲ ಉಂಡಸುರನ ನಿಲ್ಲದಂತೊರಸಿದ ಮಲ್ಲ ನಿನ್ನಯ ದಿವ್ಯ ಗಲ್ಲವ ತೋರೊ 4 ಅಂಗಸಂಗದಿ ಶತಶೃಂಗಗಿರಿಯನೊಡದ ಮಂಗಳಮೂರ್ತಿ ಮಾತಂಗ ವೈರಿಗಳ ಭಂಗಿಸಿ ಬಲುಹಿಂದ ರಂಗನರ್ತನ ಗೈವ ಶೃಂಗಾರ ಕರಗಳಿಗರಸಿನ ಹಚ್ಚುವೆನು 5 ಮುಂದೆ ಕೀಚಕಬಾಧೆಯಿಂದ ರಕ್ಷಿಸುವಿ ಸೌ ಗಂಧಿ ಕುಸುಮವನ್ನು ತಂದು ಮುಡಿಸುವಿ ಮಂದಮತಿಯ ಕುರುನಂದ ನರನು ಬೇಗ ಕೊಂದು ಮನ್ಮನಸಿಗಾನಂದ ಪಾಲಿಸುವಿ 6 ಕುಂಡಲೀ ಗಿರೀಶ ಬ್ರಹ್ಮಾಂಡ ನಾಯಕ ಹೃ- ನ್ಮಂಡಲದೊಳಗಿಟ್ಟುಕೊಂಡು ಸಂತಸದಿ ಚಂಡ ವೈರಿಗಳನ್ನು ಖಂಡಿಸಿ ಸುಖದಿಂದ ಶುಂಡಾಲ ಪುರವಾಳಿಕೊಂಡು ನೀನಿರುವಿ7
--------------
ತುಪಾಕಿ ವೆಂಕಟರಮಣಾಚಾರ್ಯ
ತಾರೆ ಮುಕ್ತಕದಾರತಿ ಹರಿಗೆ ಕಮಲ ಮುಖಿ ಗಿರಿಧರಗೆ ಪ ಕ್ರೋಢ ನರಮೃಗಗೆ ಮಾಣವಕನಿಗೆ ವೀರಭಾರ್ಗವಗೆ ಸ್ಥಾಣು ಬಾಣವ ತುರಗವಾಹನಗೆ 1 ಮಂದರೋದ್ಧರ ಮಾತುಳಾಂತಕಗೆ ಶಿಂಧು ಮಂದಿರ ಸಾರಸಾಂಬಕಗೆ ವಂದಿಸುತ ಗೋವೃಂದ ಗೋಪಾಲಗೆ 2 ಸಾಮಗಾನವಿಲೋಲ ರಂಗನಿಗೆ ಶ್ರೀಮಹಿ ರಮಣ ವೆಂಕಟಗೆ ಕಾಮಿತಾರ್ಥವ ಕೊಡುವ ಕೋಮಲಾಂಗಗೆ ಶ್ರೀ ಶಾಮಸುಂದರವಿಠಲ ಮೂರುತಿಗೆ 3
--------------
ಶಾಮಸುಂದರ ವಿಠಲ
ವಾಯುದೇವರು ಶಾಂತ ಜನರಿಗೀಶಾ ರವಿಕುಲ ಕಾಂತನ ನಿಜದಾಸ ಪ ಭ್ರಾಂತಿ ಬಿಡಿಸಿ ನಿಶ್ಚಿಂತ ಮನದಿ ವೇ- ದಾಂತವೇದ್ಯನಲಿ ಸಂತಸ ಕೊಡುವನ ಅ.ಪ. ಕಡಲ ದಾಟಿ ಬಂದೂ ಒಡೆಯನ ಮಡದಿಗುಂಗುರ ತಂದೂ ಸಡಗರದಲಿ ತುಡುಗ ದೈತ್ಯವ ಕೊಂದು ಅಡಿಯಿಡೆ ಲಂಕೆ ಸುಟ್ಟು ಸುಡುಭುಗಿ ಮಾಡಿದೆ 1 ಏಕಚಕ್ರದಲ್ಲೀ ಬಕಗೆಂ- ದ್ಹಾಕಿದ ಗ್ರಾಸದಲೀ ಶಾಖಡಿಸಲಬಿಡದೇಕತುತ್ತು ಮಾಡಿ ಭೀಕರ ದೈತ್ಯನವಲೋಕಿಸದ್ಹೊಡದೆಲೋ 2 ವಾಯು ಹನುಮ ಭೀಮ ಮಧ್ವಾ ಕಾಯೋ ಪೂರ್ಣಕಾಮಾ ಸಾಯ ಬಡಿದೀ ನೀ ಮಾಯಿಗಳೆಲ್ಲರ ರಾಯ ಶ್ರೀನಿಧಿವಿಠಲಾಯಗೆ ತಿಳಿಸಿದೆ ಎಲೆಲೋ 3
--------------
ಶ್ರೀನಿಧಿವಿಠಲರು
ವೃಷಭಾರೂಡಗೆ ರವಿಶಶಿ ನಯನಗೆ ವೃಷಭಪಾವನತ್ರಿಯಂಬಕಗೆ || ವೃಷಭಸ್ವರೂಪದಿ ಮೆರೆವ ಆಕಾರದೇವಗೆ | ವೃಷಭ ಕನ್ನಿಕೆಯರಾರುತಿ ಎತ್ತಿರೆ ವೃಷಭಾಶಿವಗೆ ಸಂಗಮಗ ಜಗದೀಶ ಮಹೇಶ-ಗಾರುತಿಯನೆತ್ತಿರೆ ವೃಷಭ ಶಿವಗೆ ಸಂಗಮಗೆ 1 ಭಾನು ಕೋಟಿ ದಿವ್ಯ ತೇಜ ಪ್ರಕಾಶಗೆ ಆನಂದಮಯಗೆ ಚಿನ್ಮಯಗೆ | ಮಾನಸದಿಂದಲಿಮೆರೆವೆನ್ನ ದೇವಗೆ ಮಾನ ಕನ್ನಿಕೆಯರಾರುತಿ ಎತ್ತಿರೆ |ವೃಷಭ ಶಿವಗೆ ಸಂಗಮಗೆ 2 ಭಾಗೀರಥಿ ಪ್ರಿಯಗೆ ಭಾಲನೇತ್ರಗೆ ಶ್ರೀ ಗೌರಿಯ ಮನೋಹರಗೆ | ನಾಗಭೂಷಣನಾರಾಯಣ ಪ್ರಿಯಗೆ ನಾಗ ಕನ್ನಿಕೆಯರಾರುತಿ ಎತ್ತಿರೆ 3 ದೇವರ ದೇವಗೆ ದೇವ ಜಗದೀಶಗೆ | ದೇವಸನ್ಮೋಹನಸ್ವಾಮಿಗೆ | ದೇವ ಸಿಂಧಾಪುರದ ಶ್ರೀ ವಿಶ್ವನಾಥಗೆದೇವ ಕನ್ನಿಕೆಯರಾರುತಿ ಎತ್ತಿರೆ 4
--------------
ಭೀಮಾಶಂಕರ
ಶೋಭಾನವೆನ್ನಿರೆ ಸಕಲ ಗುಣನಿಧಿಗೆ ಶೋಭಾನವೆನ್ನಿ ಸಮೀರ ಪಿತನಿಗೆ ಶೋಭಾನವೆನ್ನಿ ಸರೋಜಸದನ ಮನೋಭಿರಾಮನಿಗೆ ಶೋಭಾನವೆನ್ನಿ ಪ ಕಪಟ ಕಮಠಗೆ ತಪ ನಿಯಾಂಬಕನಸುಪರಿಹರಿಸಿದಗೆ ಕೃಪಣ ಪ್ರಹ್ಲಾದನ ವಿಪತ್ತು ಕಳೆದವಗೆ ಚಪಲಾಕ್ಷಿಯರಾರುತಿ ಬೆಳಗಿರೆ 1 ಕೊಡಲಿ ಕೋದಂಡವ ಪಿಡಿವ ಪಂಡಿತಗೆ ಕಡಲ ಕಟ್ಟಿಸಿ ಖಳರೊಡಲ ಬಗೆದಗೆ ಫಣಿ ಮೃಡನ ಗೆಲಿಸಿ ಕೀರ್ತಿ ಒಡನೆ ತಂದಿತ್ತಗೆ ಮಡದೇರಾರುತಿಯ ಬೆಳಗೀರೆ 2 ಹರಿಗಿ ಸುರಿಗಿ ಪಿಡಿದರವಿಂದಾಂಬಕಗೆ ಶರಧಿಯೊಳಾಡ್ದಗೆ ಗಿರಿಮಹಿಧರಗೆ ನರಹರಿ ರೂಪಗೆ ಧರಣಿಯಾಳ್ದಗೆ ಧುರದೊಳು ರಾಯರ ತರಿದ ಸಮರ್ಥಗೆ ಗರತೇರಾರುತಿಯ ಬೆಳಗೀರೆ3 ದಶರಥ ತನಯಗೆ ವಸುದೇವ ಸುತಗೆ ಕೂರ್ಮ ರೂಪಗೆ ವಸುಧಿ ವಾಹಕಗೆ ಮಿಸುನಿ ಕಶ್ಯಪಗೆ ಹೆಬ್ಬಸಿರ ಬಗೆದವಗೆ ಶಶಿಮುಖಿಯರಾರುತಿ ಬೆಳಗೀರೆ 4 ವಟು ಭೃಗುರಾಮಗೆ ಜಟಲ ಮಸ್ತಕಗೆ ಕಠಿಣ ಕಂಸನ ತಳ ಪಟವ ಮಾಡಿದಗೆ ಕಪಟ ಭೀಕರಗೆ ವಟಪತ್ರಶಯನ ನಿಷ್ಕುಟಿಲ ಜಗನ್ನಾಥ ವಿಠಲಗಾರುತಿಯ ಬೆಳಗೀರೆ 5
--------------
ಜಗನ್ನಾಥದಾಸರು