ಒಟ್ಟು 12 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನೊ ಸುಜನರ ಸಂದಣಿಯೊಳಗತಿಸುಂದರ ರಥವೇರಿ ಗುರುವರ ಬಂದನೊ ಪ ಬಂದಿ ಜನರು ಮುದದಿಂದ ಬಹುಪರಾಕೆಂದು ನುಡಿಯಲಾನಂದ ಬೀರುತ ಬಂದನೊ ಅ.ಪ. ಕ್ಷಿತಿ ಸುರಪತಿ ಶುಭಮತಿ ಬಲ್ಮತದವರೊಯತಿ ಪರರತಿಶಯ ದಶಮತಿ ಸಂ-ಸ್ಕøತ ಭಾಷಣದವರೊ ಭಯಹರಣನೆಂಬೊ ವಾ-ರುತಿಯ ಕೀರುತಿಯ ಪೂರುತಿಯ ಕೇ-ಳುತ ಮಹಿಮಾಂಗಣಕಥಿಸುತ ಗ್ರಂಥಿಸುತ ತುತಿಶುತನುತಿಸಿ ಯತಿ ಶಿರೋಮಣಿಗೆರತುನ ಖಚಿತವಾದಾರುತಿಯ ಬೆಳಗಿರೆ 1 ಸುರತರು ಶುಭ ಧೊರೆಯೋ ವಾಗ್ಝರಿಯೋಸರಸಾರ್ತಿ ಜನಗಳ ನೆರೆಸುತಾದರಿಸುತಾಬಲು ಸುಖ ಸುರಿಸುತಾ ದರಿದ್ರವ ತರಿದುಪೊರೆದೂ ಕರೆದವರಿಗೆ ಕೈ-ಶರೆಯಾಗುವೆನೆಂಧರುಷದಿ ಗುರುವರ ಬಂದನೊ 2 ವಾಲಗ ಘೊರ್ಮಿಡೆ ಭಟರುಗಳ ಹೆಗಲ ಮ್ಯಾಲೆಝಗ ಝಗಿಸುವ ಛಡಿಗಳೊ ಕುಣಿಕುಣಿದಾಡುವವರಹಿ ವೇಣಿಗಳೋ ವಾಣಿಗಳು ಶ್ರೀಣಿಗಳು ಶೋಭಿಸೆಸುಜನರು ಕೈ ಮುಗಿವರು ನಗುವರುಸಂಭ್ರಮದಿಂದ ಬಿಗಿವರು ದೃಗಾರೋಢನದಿಜಿಗಿದು ಅಘದೂರೊಗೆದ ಜನರೊಳುವೆಗ್ಗಳದಲಿಂದಿರೇಶನ ಭಕುತಾಗ್ರಣಿ ಬಂದನೊ 3 ಇಲ್ಲಿ ವರ್ಣಿತವಾದ ಯತಿಗಳು ಯಾರೆಂದು ತಿಳಿಯದು.
--------------
ಇಂದಿರೇಶರು
ಮುದ್ದುಮುಖದಾತ ನಮ್ಮ ಮುಖ್ಯಪ್ರಾಣನಾಥನೊಸದ್ಗುಣ ವಂದಿತ ವಾಯುಜಾತನೊ ರಾಮದೂತನೊ ಪ. ವೈರಿ ಶೂಲನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ 1 ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ 2 ಸಾಗರÀವನು ದಾಟಿದ ಧೀರನೊ ಕಂಠೀರವನೊರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ 3 ನಂಬಿದ ಭಕ್ತರ ಕಾಯ್ವ ದಾತನೊ ಪ್ರಖ್ಯಾತನೊಅಂಬುಜಾಸನಪದಕೆ ಬಂದು ನಿಂತನೊ ಹನುಮಂತನೊ 4 ಹಯವದನನ ಭಕ್ತ ಚೆಲ್ವ ತೇಜನೊ ಯತಿರಾಜನೊದಾನವಕುಲಕೆ ಬಹು ಭೀಮನೊ ಸಾರ್ವಭೌಮನೊ 5
--------------
ವಾದಿರಾಜ
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ ಜಗದಂತರಂಗ ಹೋ ಹೋಅಪ ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ ಲೀಲಾ ವಿನೋದ ಸುತ್ತಿ ಪರಿಗೊಲಿದ ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ- ಕಾಮಿತಗರೆದ ಹೋ ಹೋ 1 ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ ಅಂದು ಪಡೆದ-ಮಗನಿಗೆ ನುಡಿದ ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ ಬಂದ ಪರಮಾ-ನಂದ ಹೋ ಹೋ 2 ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ ಪೂಜೆಗೊಂಬ ಸರ್ವರ-ಬಿಂಬ ಹೋ ಹೋ 3 ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ ಮಾಡಿಸಿಕೊಂಡ -ಬಲು ಪ್ರಚಂಡ ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ ಕರುಣಾ-ಸಿಂಧು ಹೋ ಹೋ 4 ಮೂಜಗದ್ದಪ್ಪ ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ ಅಪ್ರಾಕೃತ ಶರೀರ-ಧೃತ ಮಂದಾರ ವಾಹನ ರಾಜಾಧಿರಾಜ ಹೋ ಹೋ 5
--------------
ವಿಜಯದಾಸ
ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ ಸರಸಿಜನಾಭ ಬಂದ ಕರಿವರದನು ಬಂದ ಕರುಣಾಕರ ನರಹರಿಯು ತಾ ಬಂದನೊ 1 ಕಂಸ ಮರ್ದನ ಬಂದ ಹಂಸ ದೇಹನು ಬಂದ ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ 2 ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ ತ್ರಿವಿಕ್ರಮ ವಿಜಯ ರಾಮಚಂದ್ರವಿಠಲ ಬಂದಾನೊ 3
--------------
ವಿಜಯ ರಾಮಚಂದ್ರವಿಠಲ
ಶ್ರೀಹರಿ ಸಂಕೀರ್ತನೆ ಈಶ ಬಂದನೊ ಸರ್ವೇಶ ಬಂದನೊ ಈಶ ಬಂದ ನೋಡಿ ಪಿಕನಾಶಿನೊಳಗೆ ಸುಳಿದಾಡುತ ವಾಸುದೇವನಾದ ಮೂರ್ತಿ ಶ್ರೀಶ ಭಕ್ತ ವಿಲಾಸರಾಮಾ ಪ ಅಂಡಜವಾಹನ ಭೂಮಂಡಲೇಂದ್ರರು ನುತಿಸುವಂಥ ಪುಂಡಲೀಕವರದ ಕೋದಂಡಧರ ದಶರಥ ನಂದನ ಎಸೆವ ಮುತ್ತಿನ ಹಾರ 1 ಎಸೆವ ಮುತ್ತಿನಹಾರ ಕೊರಳಾ ಹಸಿರು ಉಂಗುರಬೆರಳ ತುದಿಬೆರಳಿನಿಂದ ತೋರಿಕರೆವ ಸುರುತಿ ಪಾಲಕನಾದ 2 ಮುಗುಳು ನಗುವು ನಗುತ ನೀನು ಬಗೆ ಬಗೆಯ ಭಾಗ್ಯಗಳಾ ತೋರುತ ಸರರಾತ್ರಿಯ ಒಳಗೆ ಒಳ್ಳೆ ಸೊಗಸುವುಳ್ಳ ರೂಪದಿಂದಾ 3 ತಂದೆ ತಾಯಿ ತಾನೇ ಆಗಿ ಬಂಧು ಬಳಗಾ ಭಾಗ್ಯವಾಗಿ ಹರಿ ಗೋವಿಂದಾ 4 'ಹೊನ್ನವಿಠ್ಠಲ' ರಾಯಾ ಇಂದು ಮುಕುಂದಾ 5
--------------
ಹೆನ್ನೆರಂಗದಾಸರು
ಎಂಥ ಬಲವಂತನೊ-ಕುಂತಿಯ ಸಂಜಾತನೋ |ಭಾರತಿಗೆ ಕಾಂತನೊ-ನಿತ್ಯ ಶ್ರೀಮಂತನೋ ಪರಾಮಚಂದ್ರನ ಪ್ರಾಣನೊ-ಅಸುರ ಹೃದಯ ಬಾಣನೊ |ಖಳರ ಗಂಟಲ ಗಾಣನೊ-ಜಗದೊಳಗೆ ಪ್ರವೀಣನೊ 1ಬಂಡಿಯನ್ನವನುಂಡನೊ-ಬಕನ ಪ್ರಾಣವ ಕೊಂಡನೊ |ಭೀಮಪ್ರಚಂಡನೊ-ದ್ರೌಪದಿಗೆ ಗಂಡನೊ 2ಕುಂತಿಯ ಕಂದನೊ ಸೌಗಂಧಿಕವ ತಂದನೋ |ಕುರುಕ್ಷೇತ್ರಕೆ ಬಂದನೊ-ಕೌರವರ ಕೊಂದನೋ 3ವೈಷ್ಣವಾಗ್ರಗಣ್ಯನೋ-ಸಂಚಿತಾಗ್ರಪುಣ್ಯನೋ |ದೇವವರೇಣ್ಯನೊ-ದೇವ ಶರಣ್ಯನೋ 4ಮಧ್ವಶಾಸ್ತ್ರವ ರಚಿಸಿದನೊ-ಸದ್ವೈಷ್ಣವರ ಸಲಹಿದನೊ |ಉಡುಪಿಕೃಷ್ಣನ ನಿಲಿಸಿದನೊ-ಪುರಂದರವಿಠಲನ ಒಲಿಸಿದನೊ 5
--------------
ಪುರಂದರದಾಸರು