ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದನೇನೆ ಸುಂದರ ಶ್ರೀರಾಮ ಚಂದಿರ ಪ ಸಿರಿವತ್ಸಧಾರನು ಶ್ರೀತಜನೋದ್ಧಾರನು ಮಾರ ಸುಂದರನು ಮಾ ಮನೋಹರನು 1 ಕೋಮಲ ಗಾತ್ರನು ಕಮಲಕಳತ್ರನು ಕಮಲಾಪ್ತ ತೇಜನು ವಿಮಲ ಸತ್ಪಾತ್ರನು 2 ಸಾಸಿರನಾಮನು ಭಾಸುರವದನನು ಈಶ ವಂದಿತನು ಶೇಷವಿಠ್ಠಲನು 3
--------------
ಬಾಗೇಪಲ್ಲಿ ಶೇಷದಾಸರು
ರಾಮ ಬಂದನೇನೆ | ಶ್ರೀ ರಘು ರಾಮ ಬಂದನೇನೆ|| ಪ್ರೇಮಿಕ ಜನರನು ಪೊರೆಯಲಾಗಿ|ಶ್ರೀರಘು ಪ ಜಾನಕಿ ಸಹಿತ ಲಕ್ಷಣರೊಡಗೂಡಿ | ಸ್ವಾನಂದದಿ ದಿಗ್ವಿಜಯಮಾಡಿ | 1 ಈರೇಳು ವರುಷಕೆ ಬರುವೆನೆಂದು ಮುನ್ನ | ಸಾರಿದ ನುಡಿ ಸತ್ಯಮಾಡಿ ದೋರಲು 2 ಹಾರೈಸಿ ನೋಡಲು ಕಣ್ಣಿಗೆ ಹಬ್ಬ | ದೋರಲು ಮೋಹದ ಮುದ್ದು ಮೊಗದಾ3 ಅವಧಿಯ ಮೀರಲು ಅಸುವ ತೊರೆವೆಸಿಂದು | ತವಕದಿ ಭರತನ ಪಾಲಿಸಲಿಕ್ಕೆ 4 ಸಾಕೇತ ಪುರಪತಿ ಸಾಮ್ರಾಜ್ಯಲೋಲನಾಗಿ | ಸಾಕುವ ಜಗಂಗುರು ಮಹೀಪತಿ ಪ್ರಭು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಂದನೇನೆ-ರಂಗ-ಬಂದನೇನೆ-ಎನ್ನ |ತಂದೆ ಬಾಲಕೃಷ್ಣ ನವನೀತಚೋರ ಪಘಿಲುಘಿಲು ಘಿಲುರೆಂಬ ಪೊನ್ನಂದುಗೆ ಗೆಜ್ಜೆ |ಹೊಳೆಹೊಳೆಯುವಪಾದಊರುತಲಿ ||ನಲಿನಲಿದಾಡುವ ಉಂಗುರ ಅರಳೆಲೆಥಳಥಳ ಹೊಳೆಯುತ ಶ್ರೀಕೃಷ್ಣ 1ಕಿಣಿಕಿಣಿಕಿಣಿಯೆಂಬ ಕರದ ಕಂಕಣ ಬಳೆ |ಝಣಝಣಝಣರೆಂಬ ನಡುವಿನ ಗಂಟೆ ||ಗಣಗಣಗಣಯೆಂಬ ಪಾದದ ತೊಡವಿನ |ಕುಣಿಕುಣಿಕುಣಿದಾಡುತ ಶ್ರೀಕೃಷ್ಣ 2ಹಿಡಿಹಿಡಿಹಿಡಿಯೆಂದು ಪುರಂದರವಿಠಲನ |ದುಡುದುಡುದುಡುದುಡು ಓಡುತ ||ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು |ಬಿಡಿಬಿಡಿ ದಮ್ಮಯ್ಯ ಎನ್ನತಲಿ 3
--------------
ಪುರಂದರದಾಸರು