ಗೋಪಿ ಪ
ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ
ನೊರೆ ನೊರೆ ಹಾಲನು ಸುರಿಸುರಿದು ತನ್ನ
ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ
ಪರಿ ಹಾಸ್ಯ ಕುಚೋದ್ಯವ ಮಾಡುತ
ಮುರಳಿಯನೂದಿ ಬಾರೆನ್ನುತ ಬಂದನೆ1
ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು
ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ
ಹಣ್ಣನು ತಿನ್ನುವೆ ಎನ್ನುತಲೋಡಿದ
ಚಿಣ್ಣನು ಮಾಂಗಿರಿರಂಗನು ನೋಡೇ 2