ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮಣ ಸರ್ವೇಶ ತ್ವಚ್ಚರ- ಣಾರವಿಂದವ ನಂಬಿರುವನಲಿ ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ ಭಾರ ನಿನ್ನದು ಪರಮ ಕರುಣಾ ವಾರುಧಿಯೆ ನೀನಲ್ಲದೆನಗೆ- ಸಾರಥಿ 1 ಸುಗುಣ ಸಜ್ಜನ ಶಿರೋಮಣಿ ಮಗುವು ಪ್ರಹ್ಲಾದನ ಪದಾಂಬುಜ ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ ನೆಗೆದು ಬಂಡೆಯ ಝಳಪಿಸುತ ಬರೆ ಧಗಧಗಿಸಿ ಕಂಬದಲಿ ತೋರುತ ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2 ದೋಷಿ ದೈತ್ಯಾವೇಷದಿಂದಲಿ ವಾಸವಾದಿ ಸಮಸ್ತ ದಿವಿಜರ ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ ನಾಶಗೈದು ನಿರಾಪರಾಧಿ ವಿ- ಭೀಷಣಗೆ ಸಾಮ್ರಾಜ್ಯವಿತ್ತ ಪ- ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3 ಪೂತನಾ ಬಕ ಶಕಟ ಧೇನುಕ ಪಾತಕಿ ಶಾರಿಷ್ಠ ಕೇಶಿಕಿ- ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ ಕಾತರದ ಶಿಶುಪಾಲ ಮುಖ್ಯರ ಘಾತಿಸಿದ ಗರುಡಧ್ವಜನೆ ಪುರು- ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4 ಅತ್ಯಧಿಕ ಕೋಪದಲಿ ಪ್ರಜ್ವಲಿ ಕಮಲ ಜೌಸ್ತ್ರವ ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು ಸತ್ಯಭಾಮಾಕಾಂತ ಕರುಣದಿ ತೆತ್ತಿಯನು ಕಾಪಾಡಿದಖಿಳೋ- ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5 ಇರುವೆ ಮೊದಲು ಬ್ರಹ್ಮಾಂತರಾಗಿಹ ಸುರನರಾಸುರ ಮುಖ ಪ್ರಪಂಚ ದೊ- ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು ಅರಿತು ಮಾಡಿಸಿ ನೋಡಿ ನಗುತಿಹ ಪರಮ ಮಂಗಳ ಚರಿತ ನೀ ಯನ- ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6 ಆದರೀ ತೆರದಿಂದ ನಿನ್ನಯ ಪಾದ ಪಂಕಜಗಳನು ಪೊಗಳಿದ- ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು ಮೋದ ಭೋದಿ ದಯಾಬ್ಧಿ ವೆಂಕಟ ಭೂಧರೇಶನೆ ಸತತ ನಮ್ಮನು ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಧುರ ಮಹಿಮೆಯು ಸಾಧಿಸದೆ ತಿಳಿಯದು ಭೇದಿಸದಲ್ಲದೆ ಹೊಳೆಯದಿದು ಧ್ರುವ ತೆಂಗಿನ ಫಲದಂತವರ ಸಂಗದಸುಖ ಹಿಂಗದಂತನುದಿನ ಅನುಭವಿಸುವದಲ್ಲದೆ 1 ಬಂಡೆಯೊಳಿದ್ದದ ತಾ ಒಡೆದು ಪ್ರಾಶಿಸಿದಂತೆ ಕಡಲೊಳಗಿದ್ದ ರತ್ನ ಮುಳುಗಿ ತೆಗೆದಂತೆ 2 ಅಂತರಾತ್ಮದ ಸುಖ ಮಹಾತ್ಮರಗಲ್ಲದೆ ಮೂಢಾತ್ಮರಿಗಿದು ಎಲ್ಲಿಹುದು 3 ಸಾಧು ಸಂತರ ನಿಜದಾಸ ಮಹಿಪತಿಗಿನ್ನು ಸಾಧು ಸಂಗತಿ ಜೀವನ್ಮುಕ್ತಿಯು 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹಿಂದಿನ ಪುಣ್ಯ ಫಲವೆಂತೊಇಂದಿರೇಶಾನಂದದ ಲೀಲೆ ಅರುಹಿದ ಪ.ಚಿತ್ರವಿಚಿತ್ರ ಮಹಿಮೆಯ ತೋರುತಖಳದೈತ್ಯರನೆಲ್ಲ ಮಡುಹಿದದೈತ್ಯರನೆಲ್ಲ ಮಡುಹಿ ಬಳಲ್ದನೆಂದುಕಸ್ತೂರಿ ತೈಲವೆರಸಿ ತಂದು 1ಶಂಕಿನಿ ಪದ್ಮಿನಿಯರೊಂದಾಗಿ ಕೃಷ್ಣನಪಂಕಜಾಸನದಲಿ ಕುಳ್ಳಿರಿಸಿಪಂಕಜಾಸನದಲಿ ಕುಳ್ಳಿರಿಸಿ ತಮ್ಮ ಒಲ್ವಕಂಕಣಗೈಯ ಮೌಳಿಯೊಳಿಟ್ಟು 2ಈರೇಳು ಲೋಕದ ದೊರೆಯಾಗು ಭಕುತರಸಿರಿಯಾಗು ದಿತಿಜರರಿಯಾಗುಸಿರಿಯಾಗು ಭಕ್ತರ ದಿತಿಜಾರಿಯಾಗೆನುತಹರಸಿದರರ್ಥಿ ಮಿಗಿಲಾಗಿ 3ಕುಂಭಕುಚದ ಕಾಮಿನಿಯರು ಹರುಷದಿಅಂಬುಜಾಕ್ಷನ ಪೂಸಿ ಕಿರುಬೆಮರಿಅಂಬುಜಾಕ್ಷನ ಪೂಸಿ ಕಿರುಬೆಮರಿ ದಣಿಯದೆ ಕದಂಬ ಕಡಿದಟಕಾಳಿಯ ತಂದು 4ವಿಕ್ರಮಾನ್ವಿವತವಾದವ್ಯಾಕೃತ ಗಾತ್ರಕೆಅಕ್ಕರಿಂದೆ ತೈಲನಾಶನವಅಕ್ಕರಿಂದಲಿ ತೈಲನಾಶನವ ಪೂಸಿ ಜಗುಳಲುಘಕ್ಕನಂಬರವ ಬಿಗಿದುಟ್ಟ 5ಹದವಾದ ಬಿಸಿನೀರ ಪೊಂಬಂಡೆಯೊಳುತುಂಬಿಪದುಮಗಂಧೆಯರು ನೀರೆರೆದರುಪದುಮಗಂಧೆಯರು ನೀರೆರೆವ ಸಂಭ್ರಮಕ್ಕೆಮುದದಿಸುರರುಹೂಮಳೆಗರೆದರು6ಮುಂಬರಿಯುತ ಬಾಲೆಯರುತಕದಿಂದಅಂಬುಧಾರೆಯ ನಿಲ್ಲಗುಡದೆರೆದುಅಂಬುಧಾರೆಯ ನಿಲ್ಲಗುಡದೆರೆದುಜಾಂಬೂನದಾಂಬರವುಡಿಸಿ ಕರೆತಂದು 7ಚಿತ್ರಮಂಟಪಕೆ ನವರತ್ನ ತೆತ್ತಿಸಿದ ಕಂಭಕಸ್ತೂರಿ ಕಾರಣೆ ರಚನೆಯಕಸ್ತೂರಿ ಕಾರಣೆ ರಚನೆಯ ಮಧ್ಯದಿಮುತ್ತಿನ ಹಸೆಯೊಳು ಕುಳ್ಳಿರಿಸಿ 8ನೀಲಮಾಣಿಕಮೋಘದಿಂದಲೊಪ್ಪುವ ಪದಕಲೋಲನೇತ್ರೆಯರಳವಡಿಸಿದರುಲೋಲನೇತ್ರೆಯರು ಅಳವಡಿಸಿ ಅಂಗುಲಿಗೆಲ್ಲ ಮುದ್ರಿಕೆನಿಟ್ಟು ನಲಿದರು 9ಮುಕುಟಕೌಸ್ತುಭಮಣಿಯುಕುತ ಭೂಷಣವಿಟ್ಟುರುಕುಮಿಣಿ ಸತ್ಯರೆಡಬಲದಿರುಕುಮಿಣಿ ಸತ್ಯರೆಡಬಲದಿ ಕುಳ್ಳಿರೆನಿತ್ಯಮುಕುತಗಾರತಿಯ ಬೆಳಗಲು 10ಚಿನ್ನದ ಹರಿವಾಣದಿ ರನ್ನದಾರತಿಯಿಟ್ಟುಕನ್ನೇರು ಕಿರುನಗೆ ಬೀರಿದರುಕನ್ನೇರು ಕಿರುನಗೆ ಬಿರಿಯುತ ಪಣೆಯೊಳುಪೊನ್ನಿನಾಕ್ಷತೆಯಿಟ್ಟು ಲಲಿತವ 11ಜಯ ರಾಮ ತ್ರೈಧಾಮ ಜಯ ಜೀಮೂತಶಾಮಜಯ ಪೂರ್ಣಕಾಮ ಸಾಸಿರನಾಮಜಯ ಪೂರ್ಣಕಾಮ ಸಾಸಿರನಾಮನೆಂದುಭಯರಹಿತಗಾರತಿಯ ಬೆಳಗಿದರು 12ಚಿತ್ತಜನಯ್ಯಗೆ ಚಿನುಮಯ ದೇಹಗೆಉತ್ತಮಗುಣಗಣ ಭರಿತಗೆಉತ್ತಮಗುಣಗಣ ಭರಿತಗೆ ಪರಮಪವಿತ್ರೇರಾರತಿಯ ಬೆಳಗಿದರು 13ಪನ್ನಗಾದ್ರಿವಾಸ ಪ್ರಸನ್ನವೆಂಕಟೇಶಕನ್ನೆ ಲಕ್ಷ್ಮಿಯ ಕೂಡಿ ಆರೋಗಣೆಯಕನ್ನೆ ಲಕ್ಷ್ಮಿಯ ಕೂಡ ಆರೋಗಣೆಯ ಮಾಡಿತನ್ನ ಭಕ್ತರಿಗೆಲ್ಲ ಸುಖಪ್ರೀತ 14
--------------
ಪ್ರಸನ್ನವೆಂಕಟದಾಸರು