ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃತಿ | ಎಂದು ನೋಡುವೆ ಪ ಕ್ಲೇಶ ಹರಿಪಾ | ದೋಷ ದೂರಾನೇದೋಷಿ ಎನ್ನನು | ಪೋಷಿಸೂವುದು | ಸಹಸ್ರನಾಮಾನೇ 1 ಶ್ರೇಷ್ಠ ಭಕ್ತನು | ಕೊಟ್ಟ ಇಟ್ಟಿಯ | ಮೆಟ್ಟಿ ನಿಂತಾನೇಪುಟ್ಟನಾಗುತ | ಮೆಟ್ಟಿ ಒಲಿಯನು | ಕಷ್ಟ ಕಳೆದಾನೇ 2 ಬೋವ ಬಂಡಿಗೆ | ಯಾವನೀತನೇಓವಿ ಭಜಿಸಲು | ಕಾವ ಗುರು | ಗೋವಿಂದ ವಿಠಲನೇ 3
--------------
ಗುರುಗೋವಿಂದವಿಠಲರು
ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ. ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು 1 ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 2 ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ 3 ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ 4 ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಾರಿದ ಸಿರಿವರ ಸಡಗರದಿಂದಲಿ ಕೌರವಪುರಕೆ ಪ ಧೀರ ಪಾಂಡವರ ಕೋರಿಕೆ ಸಲ್ಲಿಸಲು ಸಾರಸ ನಯನನು ಅ.ಪ. ಪ್ರಾತರಾಹ್ನೀಕವ ತಾ ತೀರಿಸಿ ವರ ಪೀತ ವಸನ ಧರಿಸಿ ವೀತರಾಗ ಸಂಪ್ರೀತಿಯಲಿ ಫಾಲದಿ ತಾ ತಿಲಕವ ಧರಿಸಿ ಹೇಮ ಮಕುಟೋತ್ತಮಾಂಗದಿ ಧರಿಸಿ ಜ್ಯೋತಿರ್ಮಯಗತಿ ಪ್ರೀತಿಯಿಲಿ ತರುಣಿರಾ ರುತಿ ಬೆಳಗಲು ತಾ ಸುಮುಹೂರ್ತದಿ 1 ಅಂಡಜಾಧಿಪನು ಪ್ರಕಾಂಡ ಪೀಠನುದ್ದಂಡರಥವ ತರಿಸಿ ಚಂಡಗದಾ ಕೋದಂಡಾದ್ಯಾಯುಧ ಬಂಡಿಗೆಯೊಳಗಿರಿಸಿ ಮಾರ್ತಾಂಡನಂತೆ ಮೆರೆಸಿ ಹಿಂಡುಬಳಗಗಳ ಕಂಡಾದರಿಸುತ ಪಾಂಡುಸುತರ ಬೀಳ್ಕೊಂಡು ಭರದಲಿ 2 ಸುಖದಿ ಪ್ರಯಾಣ ಬೆಳಸಿ ಪ್ರಕಟ ಪಥದಿ ಮುನಿನಿಕರಂಗಳ ಮನವಿಕಸಿತಗೊಳಿಸಿ ಶುಕಪಿಕಾದಿ ಖಗಪಿಕರಂಗಳರವ ಸುಖವ ಮನದಿ ನಿಲಿಸಿ ಸಕಲಾಂತರ್ಗತ ಕರಿಗಿರೀಶ ತಾ ಯುಕುತಿಯಿಂದ ಸಂಧಾನವ ನಡೆಸಲು 3
--------------
ವರಾವಾಣಿರಾಮರಾಯದಾಸರು