ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ ಸತ್ಯಕ್ಕೆ ಧರ್ಮನು ಲೆತ್ತವನಾಡಲುಅರ್ಥ ಭಾಂಡರವೆಲ್ಲವ ಸೋತುಮತ್ತೆ ವಿರಾಟರಾಯನ ಮನೆಯಲ್ಲಿತೊತ್ತಾದಳು ದ್ರೌಪದಿ ಒಂದು ವರುಷ1 ಪುಂಡರೀಕಾಕ್ಷ ಪುರುಷೋತ್ತಮ ಹರಿಯಬಂಡಿಬೋವನಾದ ಪಾರ್ಥನಿಗೆ ಭೂ -ಮಂಡಲನಾಳುವ ಹರಿಶ್ಚಂದ್ರರಾಯನುಕೊಂಡವ ಕಾಯ್ದನು ಹೊಲೆಯನಾಳಾಗಿ2 ಉಂಟಾದ ಕಾಲಕ್ಕೆ ನೆಂಟರು ಇಷ್ಟರುಬಂಟರಾಗಿ ಬಾಗಿಲ ಕಾಯ್ವರುಉಂಟಾದತನ ತಪ್ಪಿ ಬಡತನ ಬಂದರೆಒಂಟೆಯಂತೆ ಗೋಣ ಮೇಲೆತ್ತುವರು 3 ಉಂಬಾಗ ಉಡುವಾಗ ಕೊಂಬಾಗ ಕೊಡುವಾಗಬೆಂಬಲದಲಿ ನಲಿನಲಿವುತಿಹರುಬೆಂಬಲತನ ತಪ್ಪಿ ಬಡತನ ಬಂದರೆಇಂಬು ನಿನಗಿಲ್ಲ ನಡೆಯೆಂಬರು4 ಏರುವ ದಂಡಿಗೆ ನೂರಾಳು ಮಂದಿಯುಮೂರು ದಿನದ ಭಾಗ್ಯ ಝಣ ಝಣವುನೂರಾರು ಸಾವಿರ ದಂಡವ ತೆತ್ತರೆರಂಗವಿಠಲನೆ ಸರಿಯೆಂಬೊರಯ್ಯ5
--------------
ಶ್ರೀಪಾದರಾಜರು
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಧನ್ಯರಿಗನ್ಯರ ಪರಿವ್ಯೇ ದೈನ್ಯಬಿಡುವರೆ ಅವರಿಗಿರುವುದೇ ಅರಿವು ಪ ಮೇಲು ಉಪ್ಪರಿಗೆಯ ಮಾಲಿನೊಳನುದಿನ ಶೀಲಸುಂದರಿಯರ ಲೋಲರಾಗಿರುವಂಥ 1 ನೀಲಕೌಸ್ತುಭಮಣಿ ಮಾಲಾಲಂಕೃತರಾಗಿ ಕಾಲಕಾಲದಿ ಮಹಲೀಲೆಯೊಳಿರುವಂಥ 2 ಮೂರ್ಹತ್ತು ಮೂರುಕೋಟಿ ವಾರಿಜಾಸನ ಸುರರಿಂ ಮೂರ್ಹೊತ್ತು ಬಿಡದಂತೆ ಸಾರಿ ಪೂಜೆಯಗೊಂಬ 3 ಎಂಟುಐಶ್ವರ್ಯಂಗಳಂಟಿಕೊಂಡು ಬಿಡದ್ವೊ ಯ್ಕುಂಠ ಪದವಿಯೊಳು ಬಂಟರಾಗಿರುವಂಥ 4 ಲೋಕೈಕ ಶ್ರೀರಾಮ ಲೋಕತ್ರಯಕೆ ತಾನೆ ಏಕದೇವನು ಎಂಬ ಯಾಕಿಂಥ ಮದವಯ್ಯ 5
--------------
ರಾಮದಾಸರು
ಬಂಟರಾಗಿ ಬಾಗಿಲ ಕಾಯೋರು ಹರಿಯವೈಕುಂಠದಿ ರಂಗನಾಯಕನರಮನೆಯ ಪ. ಸುತ್ತ ವಿರಜಾನದಿ ಮತ್ತು ನಂದನ ವನಉತ್ತಮೋತ್ತಮ ವೈಕುಂಠಉತ್ತಮೋತ್ತಮ ವೈಕುಂಠದೊಳಗಿನ್ನುಮಿಂಚಿನಂತೆ ಹೊಳೆವೊ ಮುಕ್ತರು1 ಶ್ರೀದೇವಿ ತಾನು ಮುರಹರನ ಪುರದಾಗವಿರಜಾ ತಾನೆಂದು ಕರೆಸುತವಿರಜಾ ತಾನೆಂದು ಕರೆಸುತ ನಾನಾ ಪರಿಗಿಳಿ ಕೋಗಿಲಾಗಿ ಮೆರೆವೋಳು2 ಉತ್ತರ ದಿಕ್ಕಿನಲೆಥಳ ಥಳಿಸುವ ದ್ವಾರ ಮುತ್ತು ಮಾಣಿಕ್ಯ ಅಳವಟ್ಟಮುತ್ತು ಮಾಣಿಕ್ಯ ಅಳವಟ್ಟ ಹರಿಪುರರತ್ನದ ಝಲ್ಲೆ ಬಿಗಿದಾವೆÉ 3 ರಾಜಿ ಮಾಣಿಕ ಗೋಡೆ ಗಾಜಿನ ನೆಲಗಟ್ಟುಈ ಜೋಡು ದ್ರವ್ಯ ಎಲ್ಲಿಲ್ಲ ಈ ಜೋಡು ದ್ರವ್ಯ ಎಲ್ಲಿಲ್ಲ ಇದುನಮ್ಮ ಶ್ರೀದೇವಿಯರಸನ ಅರಮನೆ 4 ಕೇಶರ ಶ್ರೀಗಂಧ ಕಲವೆಲ್ಲ ಪರಿಮಳಬಿಸÀಜನೇತ್ರನರಮನೆಯಬಿಸಜನೇತ್ರೆಯರ ಮನೆಯಿಂದ ಕುಸುಮದ ವೃಷ್ಟಿಗರೆದಾವು5 ಉತ್ತರ ಪಾಲ್ಗಡಲೊಳು ಮುತ್ತು ಮಾಣಿಕರತ್ನಪಚ್ಚ ಕರ್ಪೂರ ಸುಳಿಗಾಳಿಪಚ್ಚ ಕರ್ಪೂರ ಸುಳಿಗಾಳಿ ಇದುನಮ್ಮ ಅಚ್ಯುತಾನಂತನರಮನೆಯ6 ಕೃಷ್ಣ ರಾಮೇಶನ ವಿಶಿಷ್ಠದ ವೈಕುಂಠಸೃಷ್ಟಿ ಮಾಡಿ ರಚಿಸಿದ ಸೃಷ್ಟಿ ಮಾಡಿ ರಚಿಸಿದ ನೋಡಲು ದೃಷ್ಟಿ ಸಾಲದು ಜನರಿಗೆ7
--------------
ಗಲಗಲಿಅವ್ವನವರು
ಸಾಸಿರನಾಮ ಪೂಜೆಸಾಸಿರ ನಾಮ ಪೂಜೆಯ ಸಮಯಾ ಶ್ರೀವಾಸುದೇವನೆ ರಕ್ಷಿಪ ಸಮಯಾ ಸ್ವಾಮಿ ಪಸಾಸಿರ ದಳ ಪದ್ಮ ಮಧ್ಯಕೆ ಶ್ರೀ ವೇದವ್ಯಾಸ ಗುರುವು ಬಂದಿಹ ಸಮಯಾ ಭಾಸುರ ಛಂದಸ್ಸು ಮುಖಮಂಡಲದಿ ಪ್ರಕಾಶಿಸಿ ಮಂತ್ರ ಸಿದ್ಧಿಪ ಸಮಯಾ ಸ್ವಾಮಿ 1ಶ್ರೀರಮೆ ಧರೆ ಸಹ ಹೃದಯಮಧ್ಯದಿ ಶ್ರೀಮನ್‍ನಾರಾಯಣ ನೀನಿಹ ಸಮಯಾತೋರುತಿದಿರೆ ಪೀಠದಿ ಪೂಜೆಗೊಳುತೆನ್ನಸ್ಮೇರಾಸ್ಯದಿಂ ನೋಡುವ ಸಮಯಾ ಸ್ವಾಮಿ 2ಬೀಜನಾಮವು ದಕ್ಷಿಣ ಸ್ತನ ದೇಶದಿಭ್ರಾಜಿಸಿ ಭಕ್ತಿಗೂಡುವ ಸಮಯಾರಾಜಿಪ ಶಕ್ತಿ ನಾಮವು ವಾಮದಿ ಫಲರಾಜಿಯ ಬೆಳಸುತಿರುವ ಸಮಯಾ ಸ್ವಾಮಿ 3ಹೃದಯದಿ ಕೀಲಕ ನಾಮವು ನಿನ್ನಯಪದಸನಿಯವ ಸೇರಿಪ ಸಮಯಾಪದರದೆ ವಿಘ್ನತತಿಗೆ ಭಜಿಸೆನ್ನುತಸದಯ ಸದ್ಗುರು ನಿಯಮಿಪ ಸಮಯಾ ಸ್ವಾಮಿ 4ಅಂಗುಲಿಗಳು ನಿನ್ನ ಮಂಗಳ ನಾಮಗಳಸಂಗದಿ ಶುದ್ಧಿವಡೆದಿಹ ಸಮಯಾಗಂಗೆಯ ಪಡೆದ ನಿನ್ನಡಿಗೆ ತುಲಸಿ ಕುಸುಮಂಗಳನರ್ಪಿಸುತಿಹ ಸಮಯಾ ಸ್ವಾಮಿ 5ಅಂಗಗಳಾರು ಶುಭಾಂಗಗಳಾಗಿ ನಿನ್ನಮಂಗಳ ತನುವ ಧ್ಯಾನಿಪ ಸಮಯಾತೊಂಗದೆ ವಿಷಯಗಳೊಳು ನಿನ್ನ ಪದದುಂಗುಟದುದಿಯ ಸೇರಿಹ ಸಮಯಾ ಸ್ವಾಮಿ 6ದಶನಾಮ ದಶಕ ದಶಕ ಸಮಯದಿ ದಿವ್ಯದಶವಿಧ ಭೋಜ್ಯ ಭೋಜಿಪ ಸಮಯಾದಶವಿಧದಾರತಿಗಳ ಬೆಳಕಿಗಿಂದ್ರಿಯದಶಕವು ವಶಕೆ ಬಂದಿಹ ಸಮಯಾ ಸ್ವಾಮಿ 7ಮೀನ ಕಮಠ ಬುದ್ಧ ಕಲ್ಕಿನೀನಾಗಿ ಭಕತರಿಷ್ಟವನಿತ್ತೆ ನನ್ನಯದೀನತೆಯಳಿವರಿದೇ ಸಮಯಾ ಸ್ವಾಮಿ 8ಅನುಗ್ರಹಶಕ್ತಿಯೊಳಿರುತಷ್ಟಶಕ್ತಿಗಳನು ನೋಡಿ ಸೇವೆಗೊಳುವ ಸಮಯಾಸನಕಾದಿಗಳು ಶ್ರುತಿ ಸ್ಮøತಿ ಪುರಾಣಂಗಳುವಿನಮಿತರಾಗಿ ನುತಿಪ ಸಮಯಾ ಸ್ವಾಮಿ 9ವರ ಸಿಂಹಾಸನದಗ್ನಿ ದಿಕ್ಕಿನೊಳ್ ಧರ್ಮನುಹರುಷದಿಂ ಸೇವೆಗೈಯುವ ಸಮಯಾನಿರುರುತಿ ದೇಶದಿ ಜ್ಞಾನನು ತಾಮಸಬರದಂತೆ ಕಾದು ನಿಂದಿಹ ಸಮಯಾ ಸ್ವಾಮಿ 10ವೈರಾಗ್ಯ ವಾಯವ್ಯದೊಳು ನಿಂದು ದುಃಖವಹಾರಿಸುತಲಿ ಸೇವಿಪ ಸಮಯಾಸಾರಿರುತೈಶ್ವರ್ಯನೀಶನೆಡೆಯೊಳ್ ನೀನುತೋರಿದೂಳಿಗ ಗೈಯುವ ಸಮಯಾ ಸ್ವಾಮಿ 11ಸುರಪತಿ ದೆಶೆಯೊಳಧರ್ಮನು ಬೆದರುತಕರವ ಮುಗಿದು ನಿಂದಿಹ ಸಮಯಾಇರುತ ದಕ್ಷಿಣದಲಜ್ಞಾನನು ಚೇಷ್ಟೆಯತೊರೆದು ಭಯದಿ ಭಜಿಸುವ ಸಮಯಾ ಸ್ವಾಮಿ 12ವರುಣದಿಕ್ಕಿನೊಳವೈರಾಗ್ಯನು ನಿನ್ನಡಿಗೆರಗುವವರ ನೋಡುವ ಸಮಯಾಇರುತಲುತ್ತರದಲನೈಶ್ವರ್ಯ ಮಂತ್ರದುಚ್ಚರಣೆಯ ತಪ್ಪನೆಣಿಪ ಸಮಯಾ ಸ್ವಾಮಿ 13ಕಾಮಾದಿಗಳು ಪೀಠಸೀಮೆಯೊಳಗೆ ನಿಂತು ಕೈಮುಗಿದಲುಗದಿರುವ ಸಮಯಾತಾಮಸ ರಾಜಸ ಸಾತ್ವಿಕಗಳು ನಿನ್ನನಾಮದ ಬಲುಹ ತಿಳಿವ ಸಮಯಾ ಸ್ವಾಮಿ 14ಎಂಟು ದಿಕ್ಕಿನ ದೊರೆಗಳು ಪರಿವಾರ ಸಹಬಂಟರಾಗಿಯೆ ಕಾದಿಹ ಸಮಯಾಎಂಟು ಬಗೆಯ ಸಿರಿದೇವಿಯರೊಂದಾಗಿನಂಟುತನವ ಬಳಸಿಹ ಸಮಯಾ ಸ್ವಾಮಿ 15ಮೊದಲ ನಾಮವು ವಿಶ್ವಮಯ ನಿನ್ನ ನಿರ್ಗುಣಪದವ ಸೂಚಿಸಿ ಸಲಹುವ ಸಮಯಾತುದಿಯ ನಾಮದಿ ಭಕತರಿಗಾಗಿ ತನುದಾಳಿಒದೆದು ದುರಿತವ ರಕ್ಷಿಪ ಸಮಯಾ ಸ್ವಾಮಿ 16ದೂರಕೆ ದುರಿತವು ಹಾರಿ ಹೋಗಿಯೆ ಭಕ್ತಿಸೇರಿ ನಿನ್ನೆಡೆಯೊಳಾನಿಹ ಸಮಯಾದಾರಿದ್ರ್ಯ ದುಃಖವು ತೋರದಾನಂದವ ಸಾರಿ ನಿನ್ನನು ನುತಿಸುವ ಸಮಯಾ ಸ್ವಾಮಿ 17ಸಾಸಿರ ತಾರಕ ಜಪ ಮೊದಲು ಲಭಿಸಿಸಾಸಿರ ನಾಮ ಜಪವು ಮಧ್ಯದಿಸಾಸಿರ ವಂದನೆ ಕುಸುಮ ತುಲಸಿಗಳಸಾಸಿರದಿಂದೊಪ್ಪುವ ಸಮಯಾ ಸ್ವಾಮಿ 18ಸಾಸಿರ ಸಾಸಿರ ಜನ್ಮ ಜನ್ಮಗಳೊಳುಸಾಸಿರ ಸಾಸಿರ ತಪ್ಪುಗಳಾಸಾಸಿರ ಬಾರಿ ಮಾಡಿದ್ದರು ನಾಮದಸಾಸಿರ ಪ್ರಭೆಯೊಳಳಿವ ಸಮಯಾ ಸ್ವಾಮಿ 19ಮುಂದೆನ್ನ ಕುಲವೃದ್ಧಿಯೊಂದಿ ನಿನ್ನಯ ಕೃಪೆುಂದ ಭಕತಮಯವಹ ಸಮಯಾುಂದೆನ್ನ ಭಾಗ್ಯಕೆಣೆಯ ಕಾಣದೆ ನಿನ್ನಮುಂದೆ ನಾ ನಲಿದು ಕುಣಿವ ಸಮಯಾ ಸ್ವಾಮಿ 20ಗುರುವÀರನುಪದೇಶಿಸಿದ ಮಂತ್ರಕೆ ಸಿದ್ಧಿಬರುವ ನಿನ್ನಯ ಕೃಪೆಗಿದು ಸಮಯಾಕರುಣದಿಂ ನೋಡಿ ಕೈವಿಡಿದಭಯವನಿತ್ತುಪೊರೆವದಕೆನ್ನನಿದೇ ಸಮಯಾ ಸ್ವಾಮಿ 21ಧನ್ಯನು ಧನ್ಯನು ಧನ್ಯನು ನಾನೀಗಧನ್ಯನು ಮತ್ತು ಧನ್ಯನು ವಿಭುವೆಧನ್ಯರು ಜನನೀ ಜನಕ ಬಾಂಧವರೆಲ್ಲಧನ್ಯರೆಮ್ಮನು ನೋಡುವ ಸಮಯಾ ಸ್ವಾಮಿ 22ಮೂಲ ಮಂತ್ರಾಕ್ಷರ ಮೂಲ ನೀನಾಗಿಯೆಮೂಲಾವಿದ್ಯೆಯ ತೊಲಗಿಪ ಸಮಯಾಮೂಲೋಕನಾಯಕ ಮುಕ್ತಿ ಮಾರ್ಗಕೆುದೆಮೂಲವಾಗಿಯೆ ಬದುಕುವ ಸಮಯಾ ಸ್ವಾಮಿ 23ಮುರಹರ ಮಾಧವ ತಿಮಿರ ಭಾಸ್ಕರ ಕೃಷ್ಣಶರಣುಹೊಕ್ಕೆನು ನಿನ್ನ ಚರಣ ಪಂಕಜಗಳಪೊರೆಯುವರೆನ್ನನಿದೆ ಸಮಯಾ ಸ್ವಾಮಿ 24ತಿರುಪತಿಯೊಡೆಯನೆ ಶ್ರೀ ವಾಸುದೇವಾರ್ಯಗುರುವಾಗಿ ಕಾವೇರಿ ತೀರದಲಿಕರುಣದಿಂ ಪಾದುಕೆಗಳನಿತ್ತ ಭಾಗ್ಯವುಸ್ಥಿರವಾಗಿ ಭಕತಿ ಹೆಚ್ಚುವ ಸಮಯಾ ಸ್ವಾಮಿ 25 ಓಂ ಶಕಟಾಸುರಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಗೋವಿಂದ ನಮೋ ಗೋವಿಂದ ನಮೋ ಗೋವಿಂದ - ನಾರಾಯಣ |ಗೋವರ್ಧನ ಗಿರಿಯೆತ್ತಿದ ಗೋವಿಂದ - ನಮ್ಮ ರಕ್ಷಿಸೊ ಪ.ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |ಕರ್ತು ಯಮನವರೆಳೆದು ಒಯ್ಯಲು ಅರ್ಥ- ಪುತ್ರರು ಕಾಯ್ವರೆ 1ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ 2ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |ಬಿಡದೆ ಯಮನವರೆಳದು ಒಯ್ಯಲು ಎಡವಿಬಿದ್ದಿತು ನಾಲಗೆ 3ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |ಪ್ರಾಣ ಹೋಗಲು ಮುಟ್ಟಲಂಜುವಳುಜಾಣೆ ಕರೆದರೆ ಬಾರಳು 4ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು 5ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು 6ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ |ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ 7
--------------
ಪುರಂದರದಾಸರು